ಗದಗ: ಪ್ರೀತಿ, ಪ್ರೇಮ ವಿಚಾರವಾಗಿ 15 ವರ್ಷದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಣಗಾರ ಕಾಲೋನಿಯಲ್ಲಿ ನಡೆದಿದೆ. 15 ವರ್ಷದ 9ನೇ ತರಗತಿ ಓದುತ್ತಿದ್ದ ಖುಷಿ ರಂಗ್ರೇಜಿ ಎಂಬ ಬಾಲಕಿ ಮೃತ ದುರ್ದೈವಿ. ಯಾರು ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಗೆ ಕಾರಣ 18 ವರ್ಷದ ಮುತ್ತುರಾಜ್ ಮ್ಯಾಗೇರಿ ಹಾಗೂ 19 ವರ್ಷದ ಜುನೇದಸಾಬ್ ಕಂದಗಲ್ ಎಂಬ ವಿದ್ಯಾರ್ಥಿಗಳು ನೀಡಿದ ಕಿರುಕುಳವೇ ಕಾರಣ ಅಂತ ಮೃತ ಬಾಲಕಿ ಕುಟುಂಬಸ್ಥರ ಆರೋಪವಾಗಿದೆ. ಈ ಇಬ್ಬರು ಸೇರಿ ಒಬ್ಬಳೆ ಬಾಲಕಿಯನ್ನು ಲವ್ ಮಾಡ್ತಿದ್ದರು ಎನ್ನಲಾಗ್ತಿದೆ. ಈ ವಿಷಯ ಮನೆಯವರಿಗೆ ಗೊತ್ತಾಗಿ ಇಬ್ಬರಿಗೂ ತಾಕೀತು ಮಾಡಿದ್ದರು. ಆದರೂ ಇಬ್ಬರು ಆಗಾಗ ಭೇಟಿಯಾಗಿ ಮಾತನಾಡುವುದು, ಟಾರ್ಚರ್ ನಿಂದ ಬಾಲಕಿ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿ ಕುಟುಂಬಸ್ಥರ ಆರೋಪವಾಗಿದೆ.
ವಿದ್ಯಾರ್ಥಿಗಳಾದ ಜಿನೇದಸಾಬ್ ಹಾಗೂ ಮುತ್ತುರಾಜ್ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ರೋಣ ಸಿಪಿಐ ಹಾಗೂ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಕಳಕಪ್ಪ ಬಂಡಿ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಒಟ್ಟಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.