ದೇವನಹಳ್ಳಿ : KSRTC ಬಸ್ ಮತ್ತು ಬೈಕ್ ನಡುವೆ ಅಪಘಾತವಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಯಲಹಂಕದಲ್ಲಿ ನಡೆದಿದ್ದು. ಘಟನೆ ಸಂಬಂಧ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ: ಪ್ರೀತಿ ಮಾಡುವಂತೆ ಇಬ್ಬರು ಯುವಕರಿಂದ ಕಿರುಕುಳ : ಅಪ್ರಾಪ್ತ ಬಾಲಕಿ ಆತ್ಮಹ*ತ್ಯೆ !
ಯಲಹಂಕದ ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು. ಮೃತರನ್ನು ದೊಡ್ಡಬಳ್ಳಾಪುರ ನಗರದ ಕೆಳಗಿನಜೂಗನಹಳ್ಳಿ ನಿವಾಸಿಗಳಾದ 35 ವರ್ಷದ ವೆಂಕಟೇಶ್ ಮೂರ್ತಿ ಮತ್ತು 12 ವರ್ಷದ ಲಾವಣ್ಯ ಎಂದು ಗುರುತಿಸಲಾಗಿದೆ. ಹೆಂಡತಿ ಮತ್ತು ಮಗಳೊಂದಿಗೆ ದೊಡ್ಡಬಳ್ಳಾಪುರ ನಗರಕ್ಕೆ ಹೋಗುವ ವೇಳೆ ಅಪಘಾತವಾಗಿದ್ದು. ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.