ಬೆಂಗಳೂರು : ನಾಳೆ ಕ್ಯಾಲೇಂಡರ್ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಿನ್ನಲೆ, ಜನರು ಹಬ್ಬದ ಖರೀದಿಯಲ್ಲಿ ಸಾಕಷ್ಟು ಬಿಸಿಯಾಗಿದ್ದಾರೆ. ಆದರೆ ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಸಿಬೇಕು ಎಂದು ಪ್ಲಾನ್ ರೂಪಿಸಿದ್ದ ಜನರಿಗೆ ಬೆಲೆ ಏರಿಕೆ ಶಾಕ್ ನೀಡಿದ್ದು. ಇದರ ಕುರಿತಾದ ಒಂದು ವರದಿ ಕೆಳಗೆ ನೀಡಲಾಗಿದೆ.
ಹೌದು…ನಾಳೆ ಸುಗ್ಗಿ ಹಬ್ಬ ಸಂಕ್ರಾಂತಿ ಹಿನ್ನಲೆ ಕೆ.ಆರ್ ಮಾರ್ಕೆಟ್ನಲ್ಲಿ ಹೂ, ಹಣ್ಣು, ಪೂಜೆ ಸಾಮಾಗ್ರಿ ಖರೀದಿ ಭರಾಟೆ ಜೋರಾಗಿದ್ದು. ಬೆಳ್ಳಂಬೆಳಿಗ್ಗೆ ಜನರು ಖರೀದಿಗೆ ಮುಂದಾಗಿದ್ದಾರೆ. ಸಾಮಾನ್ಯವಾಗಿ ಸಂಕ್ರಾಂತಿ ಎಂದರೆ ಅದು ರೈತರ ಹಬ್ಬವಾಗಿದ್ದು. ಈ ಹಬ್ಬದಲ್ಲಿ ಕಬ್ಬು, ಗೆಣಸು, ಅವರೆಕಾಯಿ, ಕಡಲೆಕಾಯಿಯನ್ನು ಹೆಚ್ಚಾಗಿ ಖರೀದಿ ಮಾಡಲಾಗುತ್ತದೆ. ಈ ವಸ್ತುಗಳು ವೈಜ್ಙನಿಕವಾಗಿಯೂ ಕೂಡ ಚಳಿಗಾಲದ ಅವದಿಯಲ್ಲಿ ಆರೋಗ್ಯಕ್ಕೆ ಹೆಚ್ಚು ಅನುಕೂಲಕರವಾಗಿರುತ್ತವೆ.
ಇದನ್ನೂ ಓದಿ : ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ : ರಾಜಧಾನಿ ಸೇರಿದಂತೆ ಹಲವೆಡೆ ಮಳೆ ಸಾಧ್ಯತೆ !
ಆದರೆ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಬೆಲೆಏರಿಕೆ ಶಾಕ್ ಎದುರಾಗಿದ್ದು. ಹೂ, ಹಣ್ಣು, ಬಾಳೆ ಕಂಬ, ಕಬ್ಬಿನ ರೇಟು, ಸಾಮಾನ್ಯ ದಿನಕ್ಕಿತ ಎರಡು ಪಟ್ಟು ಹೆಚ್ಚಾಗಿದೆ. ಇದರ ನಡುವೆ ಲೋಡ್ಗಟ್ಟಲೆ ಕಬ್ಬು ರಾಜ್ಯದ ವಿವಿದ ಜಿಲ್ಲೆಗಳಿಂದ ಬೆಂಗಳೂರಿಗೆ ಬರುತ್ತಿದೆ. ವ್ಯಾಪಾರಿಗಳು ಕೂಡ ಭಾರಿ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಏನಿದೆ ಹೂ-ಹಣ್ಣುಗಳ ದರ !
ಮಲ್ಲಿಗೆ ಹೂ – 800 ರಿಂದ 1500 ಕೆ.ಜಿ.
ಕನಕಂಬರ 1500 ರಿಂದ 2000 ಕೆ.ಜಿ
ಸಂಪಿಗೆ – 400 ರಿಂದ 600 ಕೆ.ಜಿ
ಕಬ್ಬು ಜೋಡಿಗೆ – 100 ರಿಂದ 120.
ಎಳ್ಳು ಬೆಲ್ಲ ಅರ್ಧ ಕೆ.ಜಿ.- 100
ಅವರೇ ಕಾಳು – 120 ರಿಂದ 150 ಕೆ.ಜಿ.
ತೆಂಗಿನಕಾಯಿ 1ಕ್ಕೆ 40-60
ಈ ರೀತಿಯಾಗಿ ಎಲ್ಲಾ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು. ಕಡಲೆಕಾಯಿ, ಗೆಣಸಿನ ದರವು ಗಗನಕ್ಕೆ ಏರುಮುಖವಾಗಿದೆ. ಆದರೆ ಇವೆಲ್ಲದರ ನಡುವೆಯು ಜನರ ಖರೀದಿಯ ಉತ್ಸಾಹದಲ್ಲಿ ಕಡಿಮೆಯಾಗಿಲ್ಲ.