ವಿಜಯಪುರ : ಡಿಕೆಶಿ ಟೆಂಪಲ್ ರನ್ ವಿಚಾರವಾಗಿ ಮಾತನಾಡಿದ ಯತ್ನಾಳ್ ‘ ಡಿಕೆಶಿ ಪೂಜೆ ಮಾಡುತ್ತಿರುವುದೇ ಪ್ರತ್ಯಂಗಿ ಹೋಮ. ಈ ಹೋಮ ಶತ್ರುನಾಶಕ್ಕೆ ಮಾಡಲಾಗುತ್ತದೆ. ಅವರ ಶತ್ರುಗಳು ಸಿದ್ದರಾಮಯ್ಯ, ಸತೀಶ ಜಾರಕಿಹೋಳಿ, ರಾಜಣ್ಣ ಇದ್ದಾರೆ. ಇವರು ನಾಶ ಆಗಬೇಕೆಂದು ಹೋಮ ಮಾಡಿದ್ದಾರೆ ಈಗ ಎಲ್ಲಾ ದೇವಸ್ಥಾನ ತಿರುಗಾಡುತ್ತಿದ್ದಾರೆ, ಸಿಎಂ ಆಗಬೇಕೆಂದು ದೇವರು ಬಳಿ ಬೇಡಿಕೊಳ್ಳುತ್ತಾರೆ.
ಡಿಕೆಶಿಗೆ ಕುರ್ಚಿ ಬೇಕಾದಾಗ ಹಿಂದೂ ಧರ್ಮ ಹಿಂದೂ ಸನಾತನ ಧರ್ಮ ಬೇಕು. ಆದರೆ ಕುರ್ಚಿ ಬಂದ ಬಳಿಕ ಮುಸ್ಲಿಂ ನಮ್ಮ ಸಹೋದರರು ಅವರಿಗೆ ಏನಾದರೂ ಮಾಡಿದರೆ ಹುಷಾರ್ ಎನ್ನುತ್ತಾರೆ. ಅವರ ಕೊಳಕ ಬುದ್ಧಿಯನ್ನು ನೋಡಿದರೆ ಅವರು ಎಂದೂ ಸಿಎಂ ಆಗಲ್ಲ. ಡಿಕೆಶಿ ವಿರುದ್ಧ ದೊಡ್ಡ ತಂಡವೇ ತಯಾರಾಗಿದೆ.
ಯಾವ ಶತ್ರು ನಾಶಕ್ಕೆ ಹೋಮ ಮಾಡಿದ್ದಾರೋ ಅವರೇ ಇವರನ್ನ ಮನೆಗೆ ಕಳುಹಿಸುತ್ತಾರೆ ಎಂದು ಯತ್ನಾಳ ಡಿಕೆಶಿ ವಿರುದ್ದ ಗುಡುಗಿದರು.
ಇದನ್ನೂ ಓದಿ :ಪರೀಕ್ಷೆ ಮುಗಿದ ಖುಶಿಯಲ್ಲಿದ್ದ ವಿಧ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿದ ಪ್ರಿನ್ಸಿಪಲ್ !
ಮುಸ್ಲಿಂ ಯುವಕನ ಕಿರುಕುಳದಿಂದ ಹಿಂದೂ ಯುವತಿ ಆತ್ಮಹತ್ಯೆ ವಿಚಾರ!
ಕಲಬುರಗಿಯಲ್ಲಿ ಮುಸ್ಲಿಂ ಯುವಕನ ಕಿರುಕುಳಕ್ಕೆ ಹಿಂದು ಯುವತಿ ಆತ್ಮಹತ್ಯೆಯ ವಿಚಾರದ ಕುರಿತು ಮಾತನಾಡಿದ ಯತ್ನಾಳ್ ‘ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಮುಸ್ಲಿಮರಿಗೆ ಫ್ರೀ ಬಿಟ್ಟಂಗಾಗಿದೆ.
ಮುಸ್ಲಿಮರು ಏನು ಮಾಡಿದರು ಕ್ರಮವಿಲ್ಲ ಅವರಿಗೆ ಅನುಮತಿ ನೀಡಿದಂತಾಗಿದೆ, ಸುವರ್ಣಸೌಧದಲ್ಲಿ ಸಿಟಿ ರವಿ ಮೇಲೆ ಹಲ್ಲೆ ಮಾಡಲು ಮುಂದಾದವ ಅದೇ ಜನಾಂಗದವ. ಡಿಕೆಶಿ ನನ್ನ ಹಿಂದೆ ಇದ್ದಾರೆಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಡುತ್ತಿರುವ ಗೂಂಡಾಗಿರಿ ಒಳ್ಳೆಯದಲ್ಲ. ಪಂಚಮಸಾಲಿ ಸಮಾಜದ ಮೇಲೆ ಲಾಠಿ ಚಾರ್ಜ್ ಆದಾಗ ಹೆಬ್ಬಾಳಕರ್ ಖಂಡನೆ ಮಾಡಲಿಲ್ಲ.
ಸಮಾವೇಶಕ್ಕೆ ಬಂದಾಗ ಸಮಾಜದ ಮಗಳಾಗಿ ಬಂದಿದ್ದೇನೆ ಎಂದು ಹೇಳಿದರು. ನಾನು ಮಂತ್ರಿಯಾಗಿ ಹೋಗಿದ್ದೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಲಾಠಿ ಚಾರ್ಜ್ ಘಟನೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಪಾತ್ರವಿಲ್ಲ.
ಹಸ್ತಕ್ಷೇಪ ಡಿ.ಕೆ ಶಿವಕುಮಾರದ್ದು ಆಗುತ್ತಿದೆ. ಯಾರಿಂದ ಸರ್ಕಾರ ಪತನವಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಸರ್ಕಾರ ಪತನವಾಗುವ ಲಕ್ಷಣ ಕಾಣುತ್ತಿವೆ. ಲಕ್ಷ್ಮಿ ಹೆಬ್ಬಾಳಕರ್ ಅವರೇ ಸರ್ಕಾರ ಬೀಳಲು ಕಾರಣವವಾಗುತ್ತಾರೆ ಎಂದು ಯತ್ನಾಳ ಹೇಳಿಕೆ ನೀಡಿದರು.