Saturday, January 11, 2025

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನು ಪರಲೋಕಕ್ಕೆ ಕಳಿಸಿದ ಸ್ವಂತ ಅಣ್ಣ !

ಹಾಸನ : ತಮ್ಮನ ಹೆಂಡತಿಯೊಂದಿಗೆ ಅಕ್ರಮ ಸಂಬಂಧದಲ್ಲಿದ್ದ ಅಣ್ಣ, ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನು ಪರಲೋಕಕ್ಕೆ ಕಳುಹಿಸಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಸ್ವಂತ ಅಣ್ಣನಿಂದಲೆ ಕೊಲೆಯಾದ ದುರ್ದೈವಿಯನ್ನು ಆನಂದ್​ ಎಂದು ಗುರುತಿಸಲಾಗಿದೆ.

ಹಾಸನ ತಾಲ್ಲೂಕಿನ, ಮುಕುಂದೂರು ಹೊಸಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಕೊಲೆಯಾದ ಆನಂದ್​ ಮತ್ತು ಸೋಮಶೇಖರ್ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಆನಂದ್​​ ಕಳೆದ 10 ವರ್ಷದ ಹಿಂದೆ ಎಂ.ಕೆ ಅರ್ಚಿತ ಎಂಬಾಕೆಯ ಜೊತೆ ಮದುವೆಯಾಗಿದ್ದನು. ಆದರೆ ಕಳೆದ 3 ವರ್ಷದ ಹಿಂದೆ ಸೋಮಶೇಖರ್​​ನ ಹೆಂಡತಿ ಸಾವನ್ನಪ್ಪಿದ್ದಳು. ಇದರಿಂದಾಗಿ ಸೋಮಶೇಖರ್​ ತಮ್ಮನ ಮನೆಯಲ್ಲೆ ಊಟ-ತಿಂಡಿ ಮಾಡುತ್ತಿದ್ದನು.

ಈ ವೇಳೆ ತಮ್ಮನ ಹೆಂಡತಿಯನ್ನು ಸೋಮಶೇಖರ್​ ಬುಟ್ಟಿಗೆ ಬೀಳಿಸಿಕೊಂಡಿದ್ದನು. ಆಕೆಯ ಜೊತೆಗೆ ಅಕ್ರಮ ಸಂಬಂಧವನ್ನು ಹೊಂದಿದ್ದನು, ಈ ವಿಷಯವನ್ನು ತಿಳಿದಿದ್ದ ಆನಂದ ಇದರ ಕುರಿತು ಆಪ್ತರ ಬಳಿಯಲ್ಲಿ ತನ್ನ ದುಖಃವನ್ನು ನೋಡಿಕೊಂಡಿದ್ದನು. ಈ ವಿಷಯ ಹೊರಗೆ ಗೊತ್ತಾದರೆ ಮರ್ಯಾದೆ ಹಾಳಗುತ್ತದೆ ಎಂದು ಹೆದರಿದ್ದ ಆನಂದ್​ ಪತ್ನಿಗೆ ಬುದ್ದಿ ಹೇಳಿ ಸಂಸಾರವನ್ನು ನಡೆಸಲು ಮುಂದಾಗಿದ್ದನು. ಈ ವಿಷಯದಿಂದ ಕೋಪಗೊಂಡ ಸೋಮಶೇಖರ್​ ಮತ್ತು ಅರ್ಚಿತ ಆನಂದ್​ನನ್ನು ಮುಗಿಸಲು ಪ್ಲಾನ್​ ರೂಪಿಸಿದ್ದರು.

ಇದನ್ನೂ ಓದಿ : ಕೊಳವೆ ಬಾವಿಗೆ ಬಿದ್ದಿದ್ದ ನಾಯಿ ಮರಿ ರಕ್ಷಣೆ : ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ !

ಕೊಲೆ ಮಾಡಲು ಮಾಸ್ಟರ್​ ಪ್ಲಾನ್​ ರೂಪಿಸಿದ್ದ ಸೋಮಶೇಖರ್​ !

ಡಿಸೆಂಬರ್​ 26ರಂದು ಆನಂದ್​ ತನ್ನ ಬೈಕ್​ಗೆ ಪೆಟ್ರೋಲ್​ ಹಾಕಿಸಿಕೊಂಡು ಬರಲು ಹಂಗರಹಳ್ಳಿ ಗ್ರಾಮದ ಪೆಟ್ರೋಕ್ ಬಂಕ್‌ಗೆ ಹೋಗಿದ್ದನು. ಈ ವೇಳೆ ಬೇಕರಿಯಲ್ಲಿ ಮಕ್ಕಳಿಗೆ ತಿಂಡಿಯನ್ನು ಖರೀದಿಸಿ ಮನೆಗೆ  ಹೋಗುತ್ತಿದ್ದ ಆನಂದ್​ಗೆ ಅಣ್ಣ ಸೋಮಶೇಖರ್​ ಕರೆ ಮಾಡಿದ್ದನು. ಕರೆ ಮಾಡಿ ಹೇಮಾವತಿ ನಾಲೆಯ ದಡದಲ್ಲಿ ಕಂಠಪೂರ್ತಿ ಕುಡಿಸಿದ ನಂತರ ತಮ್ಮನನ್ನು ನಾಲೆಗೆ ತಳ್ಳಿ ಸೋಮಶೇಖರ್​​ ಮನೆಗೆ ಬಂದಿದ್ದನು.

ನಾಪತ್ತೆಯಾಗಿದ್ದ ಆನಂದ್​ಗಾಗಿ ಗೊರೂರು ಪೊಲೀಸ್​​ ಠಾಣೆಯಲ್ಲಿ ನಾಪತ್ತೆಯ ದೂರನ್ನು ದಾಖಲಿಸಲಾಗಿತ್ತು, ಆದರೆಡಿ.28 ರಂದು ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಕುಂಚೆವು ಗ್ರಾಮದ ಕೆರೆಯಲ್ಲಿ ಆನಂದ ಶವ ಪತ್ತೆಯಾಗಿತ್ತು. ಶವವನ್ನು ನೋಡಿದ ಸಂಬಂಧಿಕರು ಪತ್ನಿಯ ಅಕ್ರಮ ಸಂಬಂಧಕ್ಕೆ ಭೇಸತ್ತು ಆನಂದ್ ಆತ್ನಹತ್ಯೆ ಮಾಡಿಕೊಂಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ವೇಳೆ ಶವವನ್ನು ಮೇಲತ್ತಲು ಹಾಸನ ಸಂಸದರಿಗೆ ಕರೆ ಮಾಡಿ ನಾಲೆಗೆ ಹರಿಸುತ್ತಿದ್ದ ನೀರನ್ನು ನಿಲ್ಲಿಸಿ ಆನಂದ ಶವವನ್ನು ಮೇಲಕ್ಕೆತ್ತಿದ್ದರು.

ಇದನ್ನೂ ಓದಿ:ಆಧ್ಯಾತ್ಮ ಗುರು​ಗಳನ್ನು ಭೇಟಿ ಮಾಡಿದ ವಿರಾಟ್ ದಂಪತಿ : ಚಾಂಪಿಯನ್ಸ್​​ ಟ್ರೋಫಿಯಲ್ಲಿ ಮಿಂಚಲಿದ್ದಾರೆ ಎಂದ ಫ್ಯಾನ್ಸ್​

ಆನಂದ್​ ಶವವನ್ನು ಮೇಲಕ್ಕೆತ್ತಿದ ನಂತರ ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಈ ವೇಳೆ ಅಲ್ಲಿಗೆ ಬಂದ ಹೆಂಡತಿ ಅರ್ಚಿತ ‘ ನಾವು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿದ್ದೇವೆ, ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಪೋಸ್ಟ್ ಮಾ‌ರ್‌ಟಮ್ ಮಾಡಬಾರದೆಂದು ಹಠ ಹಿಡಿದಿದ್ದಳು. ಈ ವರ್ತನೆಯಿಂದ ಪೊಲೀಸರು ಆಕೆಯ ಮೇಲೆ ಅನುಮಾನಗೊಂಡು ಪೋಸ್ಟ್​​ಮಾರ್ಟಂ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು.

ಆನಂದನ ಹನ್ನೊಂದನೆ ದಿನದ ಕಾರ್ಯ ಮುಗಿದ ನಂತರ ಅರ್ಚಿತ ಮತ್ತು ಸೋಮಶೇಖರ್​ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರಿಗೆ ಆರೋಪಿಗಳು ನಡೆಸಿದ್ದ ಖತರ್ನಾಕ್​ ಪ್ಲಾನ್​ ಬೆಳಕಿಗೆ ಬಂದಿದ್ದು. ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಮ್ಮನನ್ನು ಕೊಲೆ ಮಾಡಿದ್ದಾಗಿ ಸೋಮಶೇಖರ್​ ಒಪ್ಪಿಕೊಂಡಿದ್ದಾನೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಒಳ ಪಡಿಸಿದ್ದಾರೆ.

RELATED ARTICLES

Related Articles

TRENDING ARTICLES