ಮದ್ಯಮ ವರ್ಗದ ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು. ಇದೀಗಾ ಅಡುಗೆ ಹಾಗೂ ಪೂಜೆಗೆ ಬಳಸುವ ತೆಂಗಿನ ಕಾಯಿ ಬೆಲೆ ಕಳೆದ ಆರು ತಿಂಗಳಿಂದಲೂ ಗಗನಕ್ಕೇರುತ್ತಿದೆ. ಹಾಗಾದರೆ ಯಾವ ಕಾರಣಕ್ಕೆ ತೆಂಗಿನ ಕಾಯಿ ಕಾಸ್ಲ್ಟಿ ಆಗಿದೆ ಅಂತೀರಾ ಈ ಸ್ಟೋರಿ ನೋಡಿ…
ಹೂ-ಹಣ್ಣು, ಟಮೋಟೋ, ಈರುಳ್ಳಿ ,ತರಕಾರಿ, ಅಡುಗೆ ಎಣ್ಣೆ ಹೀಗೆ ಪ್ರತಿನಿತ್ಯ ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗ್ತಾನೆ ಇರುತ್ತೆ. ಇನ್ನೂ ಸತತ ಬೆಲೆಯಿಂದ ಕಂಗೆಟ್ಟಿದ್ದ ಜನರಿಗೆ ಇದೀಗ ಪ್ರತಿನಿತ್ಯ ಬಳಸುವ ತೆಂಗಿನಕಾಯಿ ಬೆಲೆ ಕಳೆದ ಆರು ತಿಂಗಳಿಂದ ಏರಿಕೆಯಾಗಿದ್ದು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬೆಲೆ ಏರಿಕೆ ಜನರನ್ನು ಕಂಗೆಡೆಸಿದೆ.
ಹೌದು.. ಕಳೆದ ಐದಾರು ತಿಂಗಳಿಂದ ಸತತವಾಗಿ ತೆಂಗಿನಕಾಯಿ ಬೆಲೆ ಏರುತಲೇ ಇದೆ… ಕೆ.ಜಿಗೆ 30ರಿಂದ 35ರೂಪಾಯಿವರೆಗೆ ಮಾರಾಟವಾಗುತ್ತಿದ್ದ ತೆಂಗಿನ ಕಾಯಿ ಇದೀಗಾ ಕೆ.ಜಿಗೆ 60ರ ಗಡಿ ದಾಟಿದೆ. ಇನ್ನೂ ಕಳೆದ 2010ರಲ್ಲಿ ಸರಿಸುಮಾರು 55 ರೂಪಾಯಿವರೆಗೆ ಕೆ.ಜಿ ತೆಂಗಿನ ಕಾಯಿ ಮಾರಾಟವಾಗಿತ್ತು. ಆದ್ರೆ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಚ್ಚಿನ ಮಟ್ಟದಲ್ಲಿ ಬೆಲೆ ಏರಿಕೆಯಾಗಿದ್ದು.., 62ರೂಪಾಯಿಯಿಂದ 65ರೂಪಾಯಿವರೆಗೆ ತೆಂಗಿನ ಕಾಯಿ ಮಾರಾಟವಾಗುತಿದೆ.
ಇದನ್ನೂ ಓದಿ : ಚೀನಿ ವೈರಸ್ ಆತಂಕ: 10 ತಿಂಗಳ ಮಗುವಿನಲ್ಲಿ HMP ವೈರಸ್ ಪತ್ತೆ !
ಇನ್ನೂ… ಬೆಂಗಳೂರಿಗೆ ಸಾಮಾನ್ಯವಾಗಿ ಕರ್ನಾಟಕದ ಎಲ್ಲಾ ಭಾಗದಿಂದಲೂ ತೆಂಗಿನಕಾಯಿ ಆಮದಾಗುತ್ತದೆ… ಆದರೆ ಈ ಬಾರಿ ವಿಪರೀತ ಬಿಸಿಲಿದ್ದ ಕಾರಣ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು…, ಉತ್ತರ ಭಾರತಕ್ಕೆ ಸಾಕಷ್ಟು ಎಳನೀರು ರಫ್ತಾಗಿದೆ. ಇದೇ ಕಾರಣದಿಂದಾಗಿ ತೆಂಗಿನ ಕಾಯಿ ಬೆಳೆಯಲ್ಲಿ ಕುಸಿತವಾಗಿದ್ದು.., ಏಕಾಏಕಿ ಬೆಲೆ ಹೆಚ್ಚಾಗಿದೆ..
ಇನ್ನೂ… ದಿನನಿತ್ಯ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆಯಾಗ್ತಾ ಇದೆ… ಬರ್ತಿರೋ ಸಂಬಳನ್ನು ಕಡಿಮೆ ಇದ್ದು.., ಹೇಗೆ ಬದುಕೋದು ನಾವು… ಅಂತ ಜನ್ರು ಪ್ರಶ್ನೆ ಮಾಡ್ತಾ ಇದ್ದಾರೆ.. ಜೊತೆಗೆ ಎಲ್ಲಾ ಕಾರ್ಯಗಳಿಗೂ ಹಾಗೂ ಅಡುಗೆಗೆ ತೆಂಗಿನ ಕಾಯಿ ಅವಶ್ಯಕತೆ ಇದೆ ಹೀಗಾಗಿ ಎರಡೂ ಕೆ.ಜಿ ಕೊಳ್ಳುವ ಜಾಗದಲ್ಲಿ ಒಂದು ಕೆ.ಜಿ ಕೊಂಡುಕೊಳ್ಳುತ್ತಿದ್ದೇವೆ ಎಂದು ಜನ್ರು ಹೇಳ್ತಾ ಇದ್ದಾರೆ…
ಒಟ್ನಲ್ಲಿ…. ಹೂ-ಹಣ್ಣು, ತರಕಾರಿ, ಅಡುಗೆ ಎಣ್ಣೆಯ ನಂತರ ಇದೀಗಾ ತೆಂಗಿನಕಾಯಿ ಸರದಿಯಾಗಿದ್ದು ಒಂದು ಕಡೆ ಖರೀದಿ ಮಾಡಲು ಆಗದೇ ಜನರು ತತ್ತರಿಸಿದರೇ… ಮತ್ತೊಂದು ಕಡೆ ವ್ಯಾಪಾರವಿಲ್ಲದೇ ವ್ಯಾಪಾರಸ್ಥರು ಲಾಭಕ್ಕಾಗಿ ಪರಿತಪಿಸುತ್ತಿದ್ದಾರೆ.