Wednesday, January 8, 2025

ವಿಮೆ ಹಣಕ್ಕಾಗಿ ಸ್ವಂತ ತಂದೆಯನ್ನೆ ಕೊ*ಲೆ ಮಾಡಿದ ಮಗ !

ಕಲಬುರಗಿ : ಈ ಜಗತ್ತಿನಲ್ಲಿ ಹೆತ್ತ ತಂದೆ ತಾಯಿಗಳಿಗಾಗಿ ಮಕ್ಕಳು ಏನೆಲ್ಲ ತ್ಯಾಗ ಮಾಡ್ತಾರೆ. ಆದರೆ ಇಲ್ಲೊಬ್ಬ ಮಗ ಇನ್ಸೂರೆನ್ಸ್ ಹಣಕ್ಕಾಗಿ ಹೆತ್ತ ತಂದೆಯನ್ನೆ ಸಿನಿಮೀಯ ಶೈಲಿಯಲ್ಲಿ ಮರ್ಡರ್ ಮಾಡಿದ್ದಾನೆ. ಮೃತ ದುರ್ದೈವಿಯನ್ನು ಕಾಳಿಂಗ್​ ರಾವ್​ ಎಂದು ಗುರುತಿಸಲಾಗಿದೆ.

ಕಾಳಿಂಗರಾವ್ ಕಲಬುರಗಿ ನಗರದ ಆದರ್ಶ್ ಕಾಲೋನಿಯಲ್ಲಿದ್ದ ಮನೆಯಲ್ಲಿ ವಾಸವಾಗಿದ್ದರು ಇವರಿಗೆ ಮೂವರು ಮಕ್ಕಳಿದ್ದರು. ಮೂವರು ಮಕ್ಕಳ ಪೈಕಿ ಸತೀಶ್ ಎಂಬಾತ ಅದೇ ಕಾಲೋನಿಯಲ್ಲಿ ಶ್ರೀ ಸಾಯಿಬಾಬಾ ಹೆಸರಿನ ಮೇಲೆ ಹೋಟೆಲ್‌ವೊಂದನ್ನ ನಡೆಸಿಕೊಂಡು ಹೋಗ್ತಿದ್ದನು. ಹಿಗೇ ಸಿಕ್ಕಾಪಟೆ ಸಾಲ ಮಾಡಿ ಸಾಲ ತೀರಿಸಲಾಗದೇ ಪರದಾಡ್ತಿದ್ದ ಸತೀಶ್‌ ದಿಕ್ಕು ತೋಚದಂತಾಗಿದ್ದನು. ಆಗ ಅದೇ ಹೋಟೆಲ್‌ಗೆ ಬರ್ತಿದ್ದ ಅರುಣ್ ಎಂಬಾತ ಸತೀಶನಿಗೆ ಒಂದು ಐಡಿಯಾ ಕೊಡ್ತಾನೆ. ನಿಮ್ಮ ತಂದೆ ಹೆಸರಿನ ಮೇಲೆ ಎರಡು ಇನ್ಸೂರೆನ್ಸ್ ಮಾಡಿಸು ಅಂತಾ.

ಇದನ್ನೂ ಓದಿ : ‘ಹಾಸ್ಟೆಲ್​ ಹುಡುಗರು’ ಸಿನಿಮಾ ವಿರುದ್ದ ಕೋರ್ಟ್​ ಮೆಟ್ಟಿಲೇರಿದ ರಮ್ಯ : 1 ಕೋಟಿ ಪರಿಹಾರಕ್ಕೆ ಬೇಡಿಕೆ !

ಅದರಂತೆ ಸತೀಶ್ ತನ್ನ ತಂದೆಯ ಹೆಸರಿನ ಮೇಲೆ 22 ಲಕ್ಷ ಮತ್ತು 5 ಲಕ್ಷದ ಎರಡು ಇನ್ಸೂರೆನ್ಸ್ ಮಾಡಿಸುತ್ತಾನೆ. ಬಳಿಕ ನಿಮ್ಮ ತಂದೆ ಇದ್ರು ಏನು ಪ್ರಯೋಜನವಿಲ್ಲ.‌ ನಿಮ್ಮ ತಂದೆಯನ್ನ ಆ್ಯಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡೋಣ. ನನಗೆ ಮೂರು ಲಕ್ಷ ರೂಪಾಯಿ ಕೊಡು ಅಂತಾ ಡಿಲ್ ಮಾಡಿಕೊಳ್ತಾನೆ. ಡಿಲ್‌ಗೆ ಒಪ್ಪಿದ ಸತೀಶ್ ಕಳೆದ ವರ್ಷ ಜುಲೈ 8 ರಂದು ತಂದೆ ಕಾಳಿಂಗರಾಯನನ್ನ ಬೈಕ್ ಮೇಲೆ ಆದರ್ಶ್ ನಗರದಿಂದ ಬೆಣ್ಣೂರು ಗ್ರಾಮಕ್ಕೆ ಸಾಲ ತರೋದಿದೆ ಬಾ ಅಂತಾ ಬೈಕ್ ಮೇಲೆ ಕರೆದುಕೊಂಡು ಹೋಗ್ತಾನೆ. ಈ ವೇಳೆ ಬೆಣ್ಣೂರು ಕ್ರಾಸ್ ಬಳಿ ಮೂತ್ರವಿಸರ್ಜನೆಗಂತ ನಾಟಕವಾಡಿ ಬೈಕ್ ನಿಲ್ಲಿಸಿ ಹೋಗ್ತಾನೆ. ಆಗ ಬೈಕ್ ಬಳಿ ನಿಂತಿದ್ದ ತಂದೆ ಕಾಳಿಂಗರಾಯ ಮೇಲೆ ವೇಗವಾಗಿ ಬಂದ ಟ್ರ್ಯಾಕ್ಟರ್ ಹಾಯಿಸಲಾಗುತ್ತದೆ.. ಈ ವೇಳೆ ಕಾಳಿಂಗರಾಯ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪುತ್ತಾನೆ.

ನಂತರ ಮೂರ್ತವಿಸರ್ಜನೆ ಮಗಿಸಿ ತಂದೆಯ ಬಳಿಗೆ ಬಂದ ಸತೀಶ್​ ಅರುಣ್​ ಕೈಯಿಂದ ಕಲ್ಲಿನಲ್ಲಿ ತಲೆಗೆ ಹೊಡೆಸಿಕೊಂಡು ಗಂಭೀರ ಗಾಯ ಮಾಡಿಕೊಂಡಿದ್ದನು. ನಂತರ ನೇರವಾಗಿ ಮಾಡಬೂಳ ಠಾಣೆಗೆ ಹೋಗಿದ್ದ ಸತೀಶ್​ ‘ನಾವು ಬೈಕ್ ಮೇಲೆ ಹೋಗ್ತಿರೋವಾಗ ಯಾರೋ ಒಬ್ಬ ಟ್ರ್ಯಾಕ್ಟರ್‌ನಿಂದ ಗುದ್ದಿದ್ದು, ನಮ್ಮ ತಂದೆ ಕಾಳಿಂಗರಾಯ ಮೃತಪಟ್ಟಿದಾರೆಂದು ಸತೀಶ್ ಸುಳ್ಳು ಕಥೆ ಹೇಳ್ತಾನೆ’

ಸತೀಶ್‌ನ ಮಾತನ್ನ ನಂಬಿದ ಮಾಡಬೂಳ ಪೊಲೀಸರು ತನಿಖೆಗೆ ಇಳಿಯುತ್ತಾರೆ. ಕೊಲೆಯ ಯೋಜನೆ ರೂಪಸಿದ್ದ ಅರುಣ್​ಗೆ ಸತೀಶ್​ ತನ್ನ ತಾಯಿಯ ಪೋನ್​ ಪೇ ಮೂಲಕ 3 ಲಕ್ಷ ರೂಪಾಯಿ ಹಾಕುತ್ತಾನೆ. ಆದರೆ ಪೊಲೀಸರು ವಿಚಾರಣೆ ನಡೆಸಿದಾಗ ಸತೀಶ್​ ವ್ಯತಿರಿಕ್ತ ಹೇಳಿಕೆ ನೀಡಿದ್ದನು. ಇತ್ತ ಅರುಣ್​ ಅಕೌಂಟ್​ಗೆ 3 ಲಕ್ಷ ಹಣ ಹಾಕಿದ್ದರ ಬಗ್ಗೆ ಪೊಲೀಸರಿಗೆ ತಿಳಿದು ನಂತರ ವಿಚಾರಣೆ ಮಾಡಿದಾಗ ಸತ್ಯ ಹೊರಬಂದಿದೆ. ಪೊಲೀಸರ ಮುಂದೆ ಸತೀಶ್​ ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದನು.

ಇನ್ನೂ ಪ್ರಕರಣವನ್ನ ಬೇಧಿಸಿರೋ ಶಹಬಾದ್ ಡಿವೈಎಸ್ಪಿ ಶಂಕರಗೌಡ, ಮಾಡಬೂಳ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿಗಳಿಗೆ ಎಸ್ಪಿ ಅಡ್ಡೂರು ಶ್ರೀನಿವಾಸುಲು ಪ್ರಶಂಸನ ಪತ್ರ ನೀಡಿ ಗೌರವಿಸಿದ್ದಾರೆ.

RELATED ARTICLES

Related Articles

TRENDING ARTICLES