ತುಮಕೂರು: ಯುವಕನೊಬ್ಬ ಚಿರತೆ ಬಾಲವಿಡಿದು ಬೋನಿಗೆ ಹಾಕಿದ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರ ಭಾಗದಲ್ಲಿ ನಡೆದಿದೆ. ಇದನ್ನು ನೋಡಿದ ಅರಣ್ಯ ಇಲಾಖೆ ಸಿಬ್ಬಂದಿಗಳೂ ಒಂದು ಕ್ಷಣ ದಂಗಾಗಿದ್ದಾರೆ.
ಹೌದು ಪುರಲೇಹಳ್ಳಿ ರಸ್ತೆಯ ಕುಮಾರ್ ಎಂಬುವವರ ತೋಟದಲ್ಲಿ ನಿತ್ರಾಣಗೊಂಡಿದ್ದ ಚಿರತೆ ಇಡಿಯಲು ಅರಣ್ಯ ಇಲಾಖೆಯ ದಂಡೇ ಬಂದಿತ್ತು. ಇನ್ನೂ ಈ ವೇಳೆ ಚಿರತೆ ಇಡಿಯಲು ಮುಂದಾದಾಗ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಹಾಕ್ತಿದ್ದ ಚಿರತೆಯನ್ನ ಇಡಿಯಲು ಮುಂದಾದಾರಾದ್ರು ಸಾಧ್ಯವಾಗಲಿಲ್ಲ.
ಇದನ್ನೂ ಓದಿ : ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ : ಒಂದೇ ಕುಟುಂಬದ ಮೂವರು ಸಾ*ವು !
ಈ ವೇಳೆ ಸ್ಥಳೀಯರ ಗುಂಪಿನಲ್ಲಿದ್ದ ಆನಂದ್ ಎಂಬಾತ ಚಿರತೆ ಬಾಲವನ್ನು ಇಡಿದು ಚಿರತೆ ಮುಂದೆ ಹೋಗದಂತೆ ತಡೆದಿದ್ದು ಕೊಡಲೇ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿ ಚಿರತೆ ಇಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಇನ್ನೂ ಚಿರತೆ ಬಾಲ ಇಡಿದು ಸೆರೆ ಇಡಿಯಲು ಸಹಕಾರಿಯಾದ ಯುವಕನ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.