ಹೈದರಾಬಾದ್ : ‘ಪುಷ್ಪ 2′ ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೃತ ರೇವತಿ ಪುತ್ರನನ್ನು ನೋಡಲು ಇಂದು (ಜ.7) ಕಿಮ್ಸ್ ಆಸ್ಪತ್ರೆಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದಾರೆ. ಈ ವೇಳೆ ಮಗುವಿನ ತಂದೆ ಶ್ರೀ ತೇಜ್ರನ್ನು ಭೇಟಿ ಮಾಡಿ ಅವರಿಗೆ ಸಾತ್ವಾಂನ ಹೇಳಿದರು.
ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ನಟ ಅಲ್ಲು ಅರ್ಜುನ್ ವೈದ್ಯರಲ್ಲಿ ಬಾಲಕನ ಆರೋಗ್ಯದ ಬಗ್ಗೆ ವಿಚಾರಿಸಿದರು. ಈ ವೇಳೆ ಬಾಲಕನ ತಂದೆ ಶ್ರೀತೇಜ್ ಮತ್ತು ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಅಲ್ಲು ಅರ್ಜುನ್ ‘ ನಾನು ನಿಮ್ಮೊಂದಿಗ್ಗಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ :ನಟ ಸಲ್ಮಾನ್ ಖಾನ್ ಮನೆಗೆ ಬುಲೆಟ್ ಪ್ರೂಫ್ ಗಾಜಿನ ಭದ್ರತೆ !
ಏನಿದು ಘಟನೆ ?
ಡಿಸೆಂಬರ್ 4ನೇ ತಾರೀಖಿನಂದು ಹೈದರಾಬಾದ್ನ ಸಂದ್ಯಾ ಟಾಕೀಸ್ನಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಹೈದರಬಾದ್ ಪೊಲೀಸರು ಅಲ್ಲು ಅರ್ಜುನ್ರನ್ನು ಬಂಧಿಸಿದ್ದರು. ಈ ಘಟನೆ ಬಗ್ಗೆ ತೀವ್ರ ಸಂತಾಪ ಸೂಚಿಸಿದ್ದ ಅಲ್ಲು ಅರ್ಜುನ್ ಮೃತರ ಕುಟುಂಬಕ್ಕೆ ಸುಮಾರು 2 ಕೋಟಿ ಪರಿಹಾರವನ್ನು ನೀಡಿದ್ದರು.
ಈ ಪ್ರಕರಣ ತೆಲಂಗಾಣದಲ್ಲಿ ರಾಜಕೀಯ ತಿರುವನ್ನು ಪಡೆದು. ಅಲ್ಲಿಯ ಕಾಂಗ್ರೆಸ್ ಸಿಎಂ ರೇವಂತ್ ರೆಡ್ಡಿ ಮತ್ತು ಸಿನಿಮಾ ತಂಡದ ನಡುವೆ ಘರ್ಷಣೆಗೂ ಕಾರಣವಾಗಿತ್ತು.