Wednesday, January 8, 2025

ಬೈಕ್​ ಸಮೇತ ಹೇಮಾವತಿ ನಾಲೆಗೆ ಬಿದ್ದ ಸವಾರ : ಮೃತದೇಹ ಹೊರ ತೆಗೆಯಲು ಹರಸಾಹಸ !

ತುಮಕೂರು: ಬೈಕ್​ ಸಮೇತ ಹೇಮಾವತಿ ನಾಲೆಗೆ ಬಿದ್ದು ಬೈಕ್​ ಸವಾರ ಮೃತಪಟ್ಟಿದ್ದು. ಮೃತನನ್ನು ಅಜೀಬ್ ವುಲ್ಲಾ ಖಾನ್(33) ಎಂದು ಗುರುತಿಸಲಾಗಿದೆ. ಮೃತದೇಹವನ್ನು ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಯುವಕನನ್ನು ತಿಪಟೂರು ತಾಲ್ಲೂಕು ಕೆ.ಬಿ ಕ್ರಾಸ್ ನಿವಾಸಿ ಅಜೀಬ್ ವುಲ್ಲಾ ಖಾನ್ ಎಂದು ಗುರುತಿಸಿದ್ದು. ಜ.2ನೇ ತಾರೀಕು ಬೈಕ್​ನಲ್ಲಿ ಹೋಗುತ್ತಿದ್ದ ಯುವಕ ಕುಂದೂರು ಬಳಿ ಹೇಮಾವತಿ ನಾಲೆಗೆ ಬಿದ್ದಿದ್ದನು. ನಾಲೆಯಿಂದ ಹೊರಬರಲಾಗದೆ ಯುವಕ ಮೃತಪಟ್ಟಿದ್ದನು. ಮೃತದೇಹ ಸುಮಾರು 28 ಕಿ,ಮೀ ತೇಲಿಕೊಂಡು ಹೋಗಿತ್ತು.

ಇದನ್ನೂ ಓದಿ :ಭೀಕರ ರಸ್ತೆ ಅಪಘಾತ : ಜೀಪಿನಡಿ ಸಿಲುಕಿದ ಬೈಕ್​ನ್ನು 3 ಕಿ.ಮೀ ಎಳೆದೊಯ್ದ ಪೊಲೀಸ್​ ಸಿಬ್ಬಂದಿಗಳು !

ಆದರೆ ನಿನ್ನೆ ಗುಬ್ಬಿ ತಾಲ್ಲೂಕಿನ ಸೋಮಲಾಪುರದ ಬಳಿ ಮೃತದೇಹ ಪತ್ತೆಯಾಗಿದ್ದು. ಮೃತದೇಹವನ್ನು ಹೊರತೆಗೆಯುಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಆದರೆ ನಿನ್ನೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸೋಮಲಾಪುರದ ಬಳಿ ನಾಲೆ ಹೆಚ್ಚು ಆಳವಿರುವುದರಿಂದ ಕಾರ್ಯಚರಣೆ ವಿಫಲವಾಗಿದೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರ ಮನವಿಯ ಮೇರೆಗೆ ಮೃತದೇಹವನ್ನು ಹೊರತೆಗೆಯಲು ಕಾರ್ಯಚರಣೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES