ರಾಯಚೂರು : ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಣಂತಿಯರ ಸರಣಿ ಸಾವು ಮುಂದುವರಿದಿದ್ದು. ಸರಸ್ವತಿ ಎಂಬ 24 ವರ್ಷದ ಬಾಣಂತಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ರಾಯಚೂರಿನ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಾಣಂತಿ ಸರಸ್ವತಿ (24) ಸಾವನ್ನಪ್ಪಿದ್ದು. ಕಳೆದ ಮೂರು ತಿಂಗಳಲ್ಲಿ ಸಾವನ್ನಪ್ಪಿದ ಬಾಣಂತಿಯರ ಸಂಖ್ಯೆ 12ಕ್ಕೆ ಏರಿಕೆ ಆಗಿದೆ. ಜನವರಿ 2ರಂದು ಹೆರಿಗೆ ನೋವಿನಿಂದ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ, ಸಿಸೇರಿಯನ್ ಹೆರಿಗೆ ನಡೆದಿತ್ತು. ಹೆರಿಗೆ ನಡೆದ ನಂತ ಮಹಿಳೆಗೆ ರಕ್ತದೊತ್ತಡ ಸಮಸ್ಯೆಯಿಂದ ಮಹಿಳೆ ಜನವರಿ 5ರಂದು ಸಾವನ್ನಪ್ಪಿದ್ದಳು.
ಇದನ್ನೂ ಓದಿ :ಭ್ರಷ್ಟಚಾರ ಬಯಲಿಗೆಳೆದ ಪತ್ರಕರ್ತನ ಭೀಕರ ಕೊ*ಲೆ : ಲಿವರ್ನ್ನು 4 ಭಾಗ ಮಾಡಿದ್ದ ದುಷ್ಕರ್ಮಿಗಳು !
ನಾಲ್ಕನೇ ಮಗುವಿಗೆ ಜನ್ಮ ನೀಡುವ ವೇಳೆ ಮಹಿಳೆ ಸಾವನ್ನಪ್ಪಿದ್ದಳು. ಶಿಶುವನ್ನು ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು. ಸರಸ್ವಿತಿ ಸಾವಿನಿಂದ ಮಹಿಳೆಯ ಕುಟುಂಬಸ್ಥರು ಕಂಗಾಲಾಗಿದ್ದಾರೆ ಎಂದು ತಿಳಿದು ಬಂದಿದೆ.