ಬೆಂಗಳೂರು: ಸದ್ಯ ಜಾಮೀನಿನ ಮೇಲೆ ಹೊರಗಿರುವ ಕೊಲೆ ಆರೋಪಿ, ನಟ ದರ್ಶನ್ ಮತ್ತು ಗ್ಯಾಂಗ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಬೆಂಗಳೂರು ಪೊಲೀಸರು ದರ್ಶನ್ ಸೇರಿ ಇತರ 7 ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೌದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಇಂದು ಪೊಲೀಸರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ಅನಿಲ್ ಸಿ ನಿಶಾನಿಯಿಂದ ಅರ್ಜಿ ಸಲ್ಲಿಕೆಯಾಗಿದ್ದು, ನಟ ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಆರೋಪಿಗಳ ಜಾಮೀನು ರದ್ದು ಮಾಡಿವಂತೆ ಮನವಿ ಮಾಡಿದ್ದಾರೆ. ಪೊಲೀಸರ ಈ ನಡೆಯಿಂದ ಮೈಸೂರಿನಲ್ಲಿ ಜಾಲಿ ಮೂಡ್ನಲ್ಲಿರುವ ದಾಸನಿಗೆ ಡವಡವ ಶುರುವಾಗಿದೆ.
ಇದನ್ನೂ ಓದಿ :ಭ್ರಷ್ಟಚಾರ ಬಯಲಿಗೆಳೆದ ಪತ್ರಕರ್ತನ ಭೀಕರ ಕೊ*ಲೆ : ಲಿವರ್ನ್ನು 4 ಭಾಗ ಮಾಡಿದ್ದ ದುಷ್ಕರ್ಮಿಗಳು !
ಜಾಮೀನು ಪಡೆದ ಕೆಲವೆ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ನಟ ದರ್ಶನ್ ಮೈಸೂರಿನಲ್ಲಿದ್ದಾರೆ. ಹೊಸ ವರ್ಷದ ದಿನ ಡೆವಿಲ್ ಡಬ್ಬಿಂಗ್ನಲ್ಲಿ ಭಾಗವಹಿಸಿರುವ ನಟ ದರ್ಶನ್, ಮತ್ತೆ ಸಿನಿಮಾವನ್ನು ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ. ಇದರ ನಡುವೆ ಸಂಕ್ರಾಂತಿ ವೇಳೆಗೆ ನಟ ದರ್ಶನ್ಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಪೊಲೀಸರ ಈ ಕ್ರಮ ದರ್ಶನ್ ಹೃದಯ ಬಡಿತವನ್ನು ಹೆಚ್ಚಳ ಮಾಡಿರುವುಂತೂ ನಿಜ ಎನ್ನಬಹುದು .