Tuesday, January 7, 2025

ಕೋಳಿ ಹಿಡಿದಿದೆ ಎಂದು ನಾಯಿಯ ಮೇಲೆ ಮನಸೋ ಇಚ್ಚೆ ಥಳಿಸಿದ ಯುವಕ !

ಬೆಂಗಳೂರು: ನಾಯಿಯ ಮೇಲೆ ಯುವಕನೋರ್ವ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ. ಯುವಕ ಮನೋಜ್​ ಕುಮಾರ್​ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಮನೆಯೊಂದರ ಶೆಡ್‌ನಲ್ಲಿ ಕಟ್ಟಿ ಹಾಕಿದ್ದ ನಾಯಿಯ ಮೇಲೆ ಮನೋಜ್ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡು ನಿತ್ರಾಣವಾಗಿದ್ದ ನಾಯಿ 2-3 ದಿನಗಳಲ್ಲಿ ಸಾವನ್ನಪ್ಪಿದೆ. ಸಿಸಿಟಿವಿ ಪರಿಶೀಲನೆ ವೇಳೆ ಯುವಕ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ :ರಾಕಿಭಾಯ್​ ಹುಟ್ಟುಹಬ್ಬಕ್ಕೆ ಸಿಗಲಿದೆ ಸಿಹಿ ಸುದ್ದಿ : ಟಾಕ್ಸಿಕ್​ ಸಿನಿಮಾ ಟೀಸರ್​ ರಿಲೀಸ್​ !

ಯುವಕ ಸಾಕಿದ್ದ ಕೋಳಿಯನ್ನು, ನಾಯಿ ಹಿಡಿದಿತ್ತು ಎಂದು ಆರೋಪಿಸಿ ಯುವಕ ನಾಯಿಯ ಮೇಲೆ ಹಿಗ್ಗಾ ಮುಗ್ಗ ಥಳಿಸಿದ್ದಾನೆ. ನಾಯಿಯ ತಲೆಗೆ ಗಂಭೀರ ಗಾಯವಾಗಿ ಎರಡು ದಿನದ ಬಳಿಕ ನಾಯಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES