ಗದಗ : ವೇಗವಾಗಿ ಬರುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು. ಇಬ್ಬರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿದ್ದ. ಉಳಿದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ : ನಕಲಿ ED ಅಧಿಕಾರಿಗಳ ದಾಳಿ : ಕೋಟಿಗಟ್ಟಲೆ ಹಣ ಹೊತ್ತೊಯ್ದ ಕಳ್ಳರು !
ಹುಲುಕೋಟಿಯಿಂದ ಗದಗಕ್ಕೆ ಬರುವ ವೇಳೆ ಅಪಘಾತ ಸಂಭವಿಸಿದ್ದು. ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರಿಯಲ್ಲಿದ್ದ 18 ವರ್ಷದ ಮಹಮದ್ ಮತ್ತು 15 ವರ್ಷದ ಸಂಜೀವ್ ಗಿರಿಡ್ಡಿ ಎಂಬುವವರು ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ಆಶೀಸ್ ಗೂಡುರ್ ಮತ್ತು ಕಾರಿನ ಚಾಲಕ ಸಪ್ತಗಿರಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಗದಗದ ಜಿಮ್ಸ್ ಆಸ್ಙತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.