ರಾಮನಗರ : ನಗರದ ಕೆಪಿಟಿಸಿಎಲ್(KPTCL) ಪವರ್ ಕಾರ್ಪೊರೇಷನ್ ವಿದ್ಯುತ್ ಉತ್ಪಾದನ ಘಟಕದಲ್ಲಿ ಬಾಯ್ಲರ್ ಸ್ಪೋಟವಾಗಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.
ಬಿಡದಿಯ ಭೈರಮಂಗಲ ಕ್ರಾಸ್ನಲ್ಲಿರೋ ವಿಧ್ಯುತ್ ಉತ್ಪಾದನ ಘಟಕದಲ್ಲಿ ಅವಘಡ ಸಂಭವಿಸಿದ್ದು. ಬಾಯ್ಲರ್ಸ್ಪೋಟಗೊಂಡ ಪರಿಣಾಮಕ್ಕೆ ಐವರು ಕಾರ್ಮಿಕರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಅಮಲೇಶ್, ಉಮೇಶ್, ಸಂಟೋನ, ತಕೂನ, ಲಕನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕಿ ಸೆಂಟ್ರಿಂಗ್ ಮರ ಬಿದ್ದು ಸಾವು !
ಗಾಯಾಳು ಕಾರ್ಮಿಕರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ . ಘಟನಾ ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.