ಬೆಂಗಳೂರು: ದೇವಾಸ್ಥಾನ ಪ್ರವೇಶಕ್ಕೂ ಮುನ್ನ ಶರ್ಟ್ ತೆಗೆಸುವ ಪದ್ದತಿಯನ್ನು ನಿಲ್ಲಿಸಬೇಕು. ಇದೊಂದು ಅನಿಷ್ಟ ಪದ್ದತಿ ಎಂದು ಕೇರಳದ ಶಿವಗಿರಿ ಮಠದ ಶ್ರೀಗಳು ವಿವಾದ ಎಬ್ಬಿಸಿದ್ದರು. ಇದಕ್ಕ ಈಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಕೆಲ ದೇವಾಲಯಗಳಲ್ಲಿ ದೇವಾಸ್ಥಾನಕ್ಕೆ ಪ್ರವೇಶಿಸುವ ಮುನ್ನ ಪುರುಷರು ಧರಿಸಿದ ಶರ್ಟ್ಗಳನ್ನು ತೆಗೆಸುವ ಪದ್ದತಿ ಪ್ರಸ್ತುತ ಜಾರಿಯಲ್ಲಿದೆ. ಈ ನಿಯಮಗಳನ್ನು ಆಯಾ ದೇವಸ್ಥಾನದ ಆಡ.ಳಿತ ಮಂಡಳಿಗಳು ಕೈಗೊಳ್ಳುತ್ತವೆ. ಆದರೆ ಇದೀಗ ಈ ನಿಯಮಗಳಿಗೆ ಅಪಸ್ವರ ಕೇಳಿಬಂದಿದ್ದು. ಕೇರಳದ ಶಿವಗಿರಿ ಮಠದ ಸ್ವಾಮೀಜಿಗಳು ಇದರ ವಿರುದ್ದವಾಗಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ :ಪ್ರೀತಿಸಿದ ಹುಡುಗಿ ದೂರವಾಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ !
ಇದರ ಕುರಿತು ಮಾತನಾಡಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ‘ ದೇವಾಸ್ಥಾನಗಳಲ್ಲಿ ಇಂತಹ ಸಾಮಾಜಿಕ ಸುಧಾರಣೆಗಳನ್ನು ಪರಿಗಣಿಸುತ್ತೇವೆ. ದೇಗುಲಗಳನಲ್ಲಿ ಶರ್ಟ್ ಕಳಚುವ ಪದ್ದತಿಯನ್ನು ಕೈಬಿಡಲು ಚಿಂತನೆ ನಡೆದಿದೆ. ಈ ಸಂಬಂಧ ಕೇರಳದ ದೇವಸಂ ಆಡಳಿತ ಮಂಡಳಿ ಯೋಜನೆ ರೂಪಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಕೆಂಡಾಮಂಡಲವಾಗಿದ್ದು. ಇದು ಹಿಂದೂ ಧರ್ಮಕ್ಕೆ ಅಪಮಾನ ಎಂದು ಕೇರಳ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.