ಚೀನಾದಲ್ಲಿ ಹೊಸ ರೀತಿಯ ವೈರಸ್ ಉಗಮ ಇಡೀ ವಿಶ್ವಕ್ಕೆ ಆತಂಕ ಹುಟ್ಟಿಸಿದ್ದು. HMPV ಎಂಬ ವೈರಸ್ ಹರಡುತ್ತಿದೆ. ಕೇವಲ ಭಾರತದ ಮಾಧ್ಯಮಗಳು ಮಾತ್ರವಲ್ಲದೆ ಜಾಗತಿಕ ಮಾಧ್ಯಮಗಳು ಕೂಡ ಇದರ ಬಗ್ಗೆ ವರದಿ ಮಾಡುತ್ತಿವೆ.
ಚೀನಾದಲ್ಲಿ ಕಳೆದ 5 ವರ್ಷದ ಹಿಂದೆ ಕಾಣಿಸಿಕೊಂಡ ಕೋವಿಡ್-19 ವೈರಸ್ ಇಡೀ ಜಗತ್ತಿಕೆ ಕಂಟಕ ಪ್ರಾಯವಾಗಿ ಪರಿಣಮಿಸಿತ್ತು. ಇದರ ಪರಿಣಾಮವಾಗಿ ವಿಶ್ವದಲ್ಲಿ ಕೋಟ್ಯಾಂತರ ಜನರು ಪ್ರಾಣ ಕಳೆದುಕೊಳ್ಳುವಂತಾಯಿತು. ಆದರೆ ಇದೀಗ ಮತ್ತೊಂದು ಆಘಾತಕಾರಿ ವರದಿ ಬಂದಿದ್ದು. ಚೀನಾದಲ್ಲಿ ಮತ್ತೊಂದು ಹೊಸ ವಿದಧ ವೈರಸ್ ಹಾವಳಿ ಇಟ್ಟಿದೆ.
ಈ ಬಾರಿ ಚೀನಾದಲ್ಲಿ ಅನೇಕ ವಿದಧ ವೈರಸ್ಗಳು ಹಾವಳಿ ಇಟ್ಟಿದ್ದು, ಮೈಕ್ರೋ ಪ್ಲಾಸ್ಮ, ಹ್ಯೂಮನ್ ಲೆಟಪ್ಲಿನೋ ವೈರಸ್, ನ್ಯೂಮೋನಿಯಾ, ಕೋವಿಡ್ 19 ರೀತಿಯ ಅನೇಕ ವೈರಸ್ಗಳು ಚೀನಿ ಜನರನ್ನು ಭಾಧಿಸುತ್ತಿವೆ. HMPV ವೈರಸ್ ಉತ್ತರ ಚೀನಾದಲ್ಲಿ ಹೆಚ್ಚು ಆರ್ಭಟಿಸುತ್ತಿದ್ದು. 14 ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ.
ಇದನ್ನೂ ಓದಿ : ಮೂಡಾ ಇರುವವರೆಗೂ ಸಿಎಂ ಹೆಸರು ಶಾಶ್ವತವಾಗಿರುತ್ತದೆ : ಪ್ರತಾಪ್ ಸಿಂಹ
2001ರಲ್ಲೆ ಪತ್ತೆಯಾಗಿತ್ತು HMPV ವೈರಸ್
HMPV ವೈರಸ್ 2001ರಲ್ಲೆ ಪತ್ತೆಯಾಗಿತ್ತು. ಈ ವೈರಸ್ ಮೊದಲಿಗೆ ಪಕ್ಷಿಗಳಿಂದ ಮನುಷ್ಯರಿಗೆ ಹರಡಿದೆ ಎಂದು ಸಂಶೋಧನೆಗಳು ಸಾಬೀತು ಪಡಿಸಿವೆ. ಈ ವೈರಸ್ ಕೂಡ ಕೋವಿಡ್ ರೀತಿಯಲ್ಲಿ ಉಸಿರಾಟದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡಿದ್ದು. ಸುಮಾರು 3 ರಿಂದ 6 ದಿನಗಳ ಕಾಲ ಗಾಳಿಯಲ್ಲಿ ಜೀವಸಬಲ್ಲದು. ಸೋಂಕಿನ ಹರಡುವಿಕೆ ಹೆಚ್ಚಿದ್ದರೆ ಇನ್ನು ಹೆಚ್ಚಿನ ಸಮಯ ಬದುಕಿರುತ್ತದೆ.
ಈ ವೈರಸ್ ಸೋಂಕಿಗೆ ಒಳಗಾದವರಿಗೆ ಕೆಮ್ಮು, ಶೀತ, ಜ್ವರ, ಗಂಟಲು ನೋವಿನಂತಹ ಪ್ರಾರಂಭಿಕ ಲಕ್ಷಣಗಳು ಆರಂಭವಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ನ್ಯೂಮೋನಿಯಾದಂತಹ ಗಂಭೀರಾ ಸ್ವರೂಪದ ಖಾಯಿಲೆಗೂ ಕಾರಣವಾಗುತ್ತದೆ. ಇದಕ್ಕೆ ನಿರ್ಧಿಷ್ಟವಾದ ಯಾವುದೇ ವ್ಯಾಕ್ಸಿನ್ ಇಲ್ಲಿಯವರೆಗೂ ಕಂಡುಹಿಡಿಯಲಾಗಿಲ್ಲ. ಕೋವಿಡ್ 19ಕ್ಕೆ ತೆಗೆದುಕೊಳ್ಳುತ್ತಿದ್ದ ಮುನ್ನೆಚರಿಕೆ ಕ್ರಮಗಳನ್ನೆ ಕೈಗೊಂಡು ಈ ಖಾಯಿಲೆಯಿಂದ ಪಾರಾಗಬೇಕಿದೆ ಎಂದು ತಿಳಿದು ಬಂದಿದೆ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ಹರಿದಾಡುತ್ತಿದ್ದು. ಈ ವಿಡಿಯೋಗಳನ್ನು ಪ್ರಸ್ತುತ ಚೀನಾದಲ್ಲಿರುವ ಪರಿಸ್ಥಿತಿ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಇವುಗಳ ಸತ್ಯಾ ಸತ್ಯತೆ ಕುರಿತು ಇನ್ನಷ್ಟೆ ಮಾಹಿತಿ ಬರಬೇಕಿದೆ .