ಸಿಡ್ನಿ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 185 ರನ್ಗಳಿಗೆ ಆಲೌಟ್ ಆಗಿದ್ದು. ಭಾರತದ ಬ್ಯಾಟಿಂಗ್ ವಿಭಾಗ ಮತ್ತೆ ವಿಫಲವಾಗಿದೆ. ಭಾರತದ ಪರ ರಿಷಬ್ ಪಂತ್ 40 ರನ್ ಗಳಿಸಿದ್ದು ಬಿಟ್ಟರೆ. ಇತರೆ ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಲಿಲ್ಲ.
ಸಿಡ್ನಿಯಲ್ಲಿ ನಡೆಯುತ್ತಿರುವ ಕೊನೆಯ ಬಾರ್ಡರ್ ಗವಾಸ್ಕರ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತದ ಆರಂಭಿಕ ಆಟಗಾರರು ಹೆಚ್ಚು ಸಮಯ ಸ್ಕ್ರೀಸ್ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಜೈಸ್ವಾಲ್ (10) ಮತ್ತು ಕನ್ನಡಿಗ ಕೆ,ಎಲ್ ರಾಹುಲ್ 4ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಗಿಲ್ ಮತ್ತು ಕೊಹ್ಲಿ ಕೆಲವು ಸಮಯ ಸ್ಕ್ರೀಸ್ನಲ್ಲಿದ್ದರು ಸಹ ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.
ಇದನ್ನೂ ಓದಿ ; ನೀರು ಶುದ್ಧೀಕರಣ ಘಟಕದಲ್ಲಿ ಸತ್ತುಬಿದ್ದ ನಾಯಿ : 17 ಗ್ರಾಮದ ಜನರಿಗೆ ವಾಂತಿ ಭೇದಿಯ ಆತಂಕ !
ಭಾರತದ ಪರ ವಿಕೆಟ್ ಕೀಪರ್ ರಿಷಬ್ ಪಂತ್ 40 ರನ್ ಗಳಿಸಿದರೆ. ಜಡೇಜಾ 26ರನ್ ಗಳಿಸಿ ಔಟಾದರು. ಕಡೆಯಲ್ಲಿ ಬ್ಯಾಟ್ ಬೀಸಿದ ನಾಯಕ ಜಸ್ಪ್ರೀತ್ ಬುಮ್ರಾ ಕೇವಲ 17 ಎಸೆತಗಳಲ್ಲಿ 22 ರನ್ಗಳಿಸಿ ಔಟಾದರು.
ಆಸ್ಟ್ರೇಲಿಯಾ ಪರ ಬೊಲಾಂಡಾ 4 ವಿಕೆಟ್ ಪಡೆದು ಮಿಂಚಿದರೆ. ಮಿಚಲ್ ಸ್ಟಾರ್ಕ್ 3 ವಿಕೆಟ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದರು.