Sunday, January 5, 2025

ಹೊಸ ವರ್ಷದ ಹಿನ್ನೆಲೆ ಬಿಎಂಟಿಸಿಗೆ ಒಂದೇ ದಿನಕ್ಕೆ ಕೋಟಿ ಕೋಟಿ ಆದಾಯ

ಬೆಂಗಳೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆ ವಿಶ್ವದಾದ್ಯಂತ ಎಲ್ಲೆಡೆ ಜನರು ಭರ್ಜರಿಯಾಗಿ 2025 ಇಸವಿಯನ್ನು ವೆಲ್​ ಕಮ್​ ಮಾಡಿಕೊಂಡಿದ್ದು ನಮ್ಮ ಹೆಮ್ಮೆಯ ಕರ್ನಾಟಕದ ಬೆಂಗಳೂರಿನಲ್ಲಿಯೂ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ಇದ್ದರಿಂದಾಗಿ ಸಾರಿಗೆ ನಿಗಮಕ್ಕೆ ನಿರೀಕ್ಷೆಗೂ ಮೀರಿದ ಆದಾಯ ಹರಿದು ಬಂದಿರುವ ಸುದ್ದಿ ಹೊರಬಿದ್ದಿದೆ.

ಹೌದು, ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಸಾರಿಗೆ ನಿಮಗಗಳಲ್ಲಿ ಒಂದಾದ ಬಿಎಂಟಿಸಿ ಬಸ್​ಗಳು ಡಿಸೆಂಬರ್​ 31ರಲ್ಲಿ ಹೆಚ್ಚು ಆದಾಯ ಗಳಿಸಿ ದಾಖಲೆ ನಿರ್ಮಿಸಿದೆ. ಡಿಸೆಂಬರ್​ 31ರಿಂದ ಜನವರಿ ಮಧ್ಯರಾತ್ರಿ 2ಗಂಟೆ ವರೆಗೂ ಬಸ್​ಗಳು ಸಂಚಾರ ನಡೆಸಿದ್ದವು. ಇದರ ಪರಿಣಾಮ ಬಿಎಂಟಿಸಿಗೆ ಕೋಟಿ ಕೋಟಿ ಆದಾಯ ಬಂದಿದೆ.

ಹೊಸ ವರ್ಷ ಹಿನ್ನೆಲೆ ನಗರದಾದ್ಯಂತ ವಿವಿಧ ಭಾಗಗಳಿಗೆ ಬಿಎಂಟಿಸಿ ಬಸ್​ಗಳನ್ನು ಹೆಚ್ಚುವರಿಯಾಗಿ ಬಿಡಲಾಗಿತ್ತು. ಸದ್ಯ ನಿಗಮದ ವರದಿ ಪ್ರಕಾರ ಡಿಸೆಂಬರ್ 31ರಂದು ಒಟ್ಟು 35 ಲಕ್ಷ 70 ಸಾವಿರದ 842 ಪ್ರಯಾಣಿಕರು ಬಿಎಂಟಿಸಿ ಬಸ್​ ಬಳಸಿದ್ದಾರೆ. ಇದರಿಂದ ಬರೋಬ್ಬರಿ 5 ಕೋಟಿ 48 ಲಕ್ಷದ 89 ಸಾವಿರದ 254 ರೂಪಾಯಿ ಆದಾಯ ಬಂದಿದೆ ಎಂದು ಬಿಎಂಟಿಸಿ ರೆವೆನ್ಯೂ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES