Sunday, January 5, 2025

KSRTC ಬಸ್​​ ಅಪಘಾತ : ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರಿ ದುರಂತ !

ಬಾಗಲಕೋಟೆ : ಎದುರಿಗೆ ಬರುತ್ತಿದ್ದ ಟ್ಯಾಂಕರ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕೆಎಸ್​ಆರ್​ಟಿಸಿ ಬಸ್​​ ರಸ್ತೆಯ ಪಕ್ಕದ ಹಳ್ಳಕ್ಕೆ ವಾಲಿದ್ದು. ಕೂದಲೆಳೆ ಅಂತರದಲ್ಲಿ ಭಾರಿ ದುರಂತ ತಪ್ಪಿದೆ. ಅಪಘಾತದಲ್ಲಿ ಸುಮಾರು 4 ಜನರಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಬೆನ್ನೂರು ಗ್ರಾಮದಿಂದ ಹೊರಟ್ಟಿದ್ದ KSRTC ಬಸ್​ ಬಾಗಲಕೋಟೆ ಕಡೆಗೆ ಬರುತ್ತದ್ದ ವೇಳೆ ಟ್ಯಾಂಕರ್​ ಅಡ್ಡ ಬಂದಿದ್ದ. ಈ ವೇಳೆ ಟ್ಯಾಂಕರ್ ಜೊತೆಗೆ ಸಂಭವಿಸಬಹುದಾದ ಅಪಘಾತದ ಬಗ್ಗೆ ಮುನ್ನಚರಿಕೆ ವಹಿಸಿದ ಬಸ್​ ಚಾಲಕ ಬಸ್​ನ್ನು ರಸ್ತೆಯ ಎಡಭಾಗಕ್ಕೆ ತೆಗೆದುಕೊಂಡಿದ್ದಾನೆ. ಈ ವೇಳೆ ಬಸ್​ ರಸ್ತೆ ಪಕ್ಕದಲ್ಲಿದ್ದ ಇಳಿಜಾರಿಗೆ ಇಳಿದಿದ್ದು. ಭಾಗಶಃ ವಾಲಿಕೊಂಡಿದೆ.

ಇದನ್ನೂ ಓದಿ : ಮಗಳ ಮೇಲೆ ಕಣ್ಣು ಹಾಕಿದ ಪತಿಯನ್ನು ತುಂಡು ತುಂಡು ಮಾಡಿದ ಪತ್ನಿ : ನಂತರ ನಡೆಯಿತು ರೋಚಕ ಕಹಾನಿ

ಬಸ್​​ನಲ್ಲಿದ್ದ ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಬಸ್​ನಿಂದ ಹೊರಗೆ ಬಂದಿದ್ದಾರೆ. ಪ್ರಯಾಣಿಕರಲ್ಲಿ ನಾಲ್ಕೈದು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES