ನಾಳೆಯಿಂದ(ಜ.03) ಆರಂಭವಾಗಿಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್ ಪಂದ್ಯದಿಂದ ನಾಯಕ ರೋಹಿತ್ ಶರ್ಮರನ್ನು ಕೈಬಿಡಲಾಗಿದೆ ಎಂದು ಮಾಹಿತಿ ದೊರೆತಿದೆ. ಕಳೆದ ಮೂರು ಪಂದ್ಯಗಳಿಂದಲೂ ಕಳಪೆ ಫಾರ್ಮ್ನಲ್ಲಿರುವ ರೋಹಿತ್ ಶರ್ಮಗೆ ಕೊನೆಯ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ.
ಎರಡನೇ ಮಗುವಿನ ಜನನದ ಕಾರಣದಿಂದ ಮೊದಲ ಟೆಸ್ಟ್ ಅನ್ನು ಕಳೆದುಕೊಂಡಿದ್ದ ರೋಹಿತ್ ಎರಡನೇ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ನಾಯಕತ್ವಕ್ಕೆ ಮರಳಿದ್ದರು. ಎರಡನೇ ಮತ್ತು ಮೂರನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರೋಹಿತ್ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದರು. ಒಟ್ಟಾರೆಯಾಗಿ ಕಳೆದ 3 ಪಂದ್ಯಗಳಿಂದ ರೋಹಿತ್ ಶರ್ಮ ಕೇವಲ 31ರನ್ಗಳನ್ನು ಗಳಿಸಿದ್ದಾರೆ.
ಇದನ್ನೂಓದಿ : ಪ್ರಯಾಣಿಕರಿಗೆ ಬಿಗ್ ಶಾಕ್: ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು
ಇದರ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯ ಕೋಚ್ ಗೌತಮ್ ಗಂಭೀರ ‘ ರೋಹಿತ್ ಜೊತೆ ಎಲ್ಲವೂ ಚನ್ನಾಗಿದೆ. ಆದರೆ ನಾಳೆ ಪಿಚ್ನ್ನು ನೋಡಿಕೊಂಡು ಪ್ಲೇಯಿಂಗ್ 11ರ ಬಳಗವನ್ನು ಆಯ್ಕೆ ಮಾಡುತ್ತೇವೆ. ಎಂದು ಹೇಳಿದ್ದಾರೆ. ಒಂದು ವೇಳೆ ರೋಹಿತ್ಗೆ ವಿಶ್ರಾಂತಿ ನೀಡಿದರೆ ಬುಮ್ರಾಗೆ ನಾಯಕತ್ವ ನೀಡುವ ಸಾಧ್ಯತೆ ಇದ್ದು. ರೋಹಿತ್ ಜಾಗಕ್ಕೆ ಶುಭಮನ್ ಗಿಲ್ ಆಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಈ ಎಲ್ಲಾ ಗೊಂದಲಗಳಿಗೆ ನಾಳೆ ತೆರೆಬೀಳಲಿದೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯವನ್ನು ಗೆಲ್ಲುವುದು ಭಾರತಕ್ಕೆ ಹೆಚ್ಚು ಅವಶ್ಯಕತೆ ಇದ್ದು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಲು ಈ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿದೆ.