ಡಬಲ್ ಒಲಿಂಪಿಕ್ ಪದಕ ವಿಜೇತ ಮನು ಭಾಕರ್ ಮತ್ತು ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್ ಸೇರಿದಂತೆ ಒಟ್ಟು 4 ಜನರಿಗೆ ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಕ್ರೀಡಾ ಇಲಾಖೆ ಘೋಷಿಸಿದೆ. ದೇಶ
ಇಂದು(ಜ.02) ಕ್ರೀಡಾ ಇಲಾಖೆ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಿದ್ದು. ಒಲಂಪಿಕ್ನಲ್ಲಿ ಎರಡು ಪದಕಗಳನ್ನು ಗೆದ್ದು ಸಾಧನೆ ಮಾಡಿದ ಮನು ಭಾಕರ್ ಮತ್ತು ಇತ್ತೀಚೆಗೆ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಗೆಲುವು ಸಾಧಿಸಿ ವಿಶ್ವದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎಂಬ ಬಿರುದಿಗೆ ಪಾತ್ರರಾಗಿದ್ದ ಗುಕೇಶ್ ದೊಮ್ಮರಾಜು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ : ಹಳದಿ ಮೆಟ್ರೋ ಮಾರ್ಗ ಉದ್ಘಾಟನೆ ವಿಳಂಭ : ಟ್ವಿಟ್ ಮಾಡಿ ಬೇಸರ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ !
ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ ಎಂಬುವವರು ಕೂಡ ಖೇಲ್ ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜನವರಿ 17ರಂದು ರಾಷ್ಟ್ರಪ್ರಶಸ್ತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ !
ಕ್ರೀಡಾ ವಿಭಾಗದಲ್ಲಿ ನೀಡುವ ಎಲ್ಲಾ ಪ್ರಶಸ್ತಗಳನ್ನು ಇಂದೆ ಘೋಷಿಸಲಾಗಿದ್ದು. ಅರ್ಜುನ ಪ್ರಶಸ್ತಿಗೆ ಪಾತ್ರರಾದವರ ಪಟ್ಟಿ ಕೆಳಗಿನಂತಿದೆ.
- ಶ್ರೀಮತಿ ಜ್ಯೋತಿ ಯರ್ರಾಜಿ – ಅಥ್ಲೆಟಿಕ್ಸ್
- ಶ್ರೀಮತಿ ಅಣ್ಣು ರಾಣಿ – ಅಥ್ಲೆಟಿಕ್ಸ್
- ಶ್ರೀಮತಿ ನಿತು – ಬಾಕ್ಸಿಂಗ್
- ಶ್ರೀಮತಿ ಸವೀಟಿ – ಬಾಕ್ಸಿಂಗ್
- ಶ್ರೀಮತಿ ವಾಂತಿಕಾ ಅಗರವಾಲ್ – ಚೆಸ್
- ಶ್ರೀಮತಿ ಸಲೀಮಾ ಟೆಟೆ – ಹಾಕಿ
- ಶ್ರೀ ಅಭಿಷೇಕ್ – ಹಾಕಿ
- ಶ್ರೀ ಸಂಜಯ್ – ಹಾಕಿ
- ಶ್ರೀ ಜರ್ಮನ್ಪ್ರೀತ್ ಸಿಂಗ್ – ಹಾಕಿ
- ಶ್ರೀ ಸುಖಜೀತ್ ಸಿಂಗ್ – ಹಾಕಿ
- ಶ್ರೀ ರಾಕೇಶ್ ಕುಮಾರ್ – ಪ್ಯಾರಾ-ಆರ್ಚರಿ
- ಶ್ರೀಮತಿ ಪ್ರೀತಿ ಪಾಲ್ – ಪ್ಯಾರಾ-ಅಥ್ಲೆಟಿಕ್ಸ್
- ಶ್ರೀಮತಿ ಜೀವನಜಿ ದೀಪ್ತಿ – ಪ್ಯಾರಾ-ಅಥ್ಲೆಟಿಕ್ಸ್
- ಶ್ರೀ ಅಜೀತ್ ಸಿಂಗ್ – ಪ್ಯಾರಾ-ಅಥ್ಲೆಟಿಕ್ಸ್
- ಶ್ರೀ ಸಚಿನ್ ಸರ್ಜೆರಾವ್ ಖಿಲಾರಿ – ಪ್ಯಾರಾ-ಅಥ್ಲೆಟಿಕ್ಸ್
- ಶ್ರೀ ಧರಂಬೀರ್ – ಪ್ಯಾರಾ-ಅಥ್ಲೆಟಿಕ್ಸ್
- ಶ್ರೀ ಪ್ರಣವ್ ಸೂರ್ಮಾ – ಪ್ಯಾರಾ-ಅಥ್ಲೆಟಿಕ್ಸ್
- ಶ್ರೀ ಹೆಚ್ ಹೊಕಾಟೊ ಸೆಮಾ – ಪ್ಯಾರಾ-ಅಥ್ಲೆಟಿಕ್ಸ್
- ಶ್ರೀಮತಿ ಸಿಮ್ರಾನ್ – ಪ್ಯಾರಾ-ಅಥ್ಲೆಟಿಕ್ಸ್
- ಶ್ರೀ ನವದೀಪ್ – ಪ್ಯಾರಾ-ಅಥ್ಲೆಟಿಕ್ಸ್
- ಶ್ರೀ ನಿತೇಶ್ ಕುಮಾರ್ – ಪ್ಯಾರಾ-ಬ್ಯಾಡ್ಮಿಂಟನ್
- ಶ್ರೀಮತಿ ತುಳಸಿಮತಿ ಮುರುಗೇಶನ್ – ಪ್ಯಾರಾ-ಬ್ಯಾಡ್ಮಿಂಟನ್
- ಶ್ರೀಮತಿ ನಿತ್ಯ ಶ್ರೀ ಸುಮತಿ ಶಿವನ್ – ಪ್ಯಾರಾ-ಬ್ಯಾಡ್ಮಿಂಟನ್
- ಶ್ರೀಮತಿ ಮನಿಶಾ ರಾಮದಾಸ್ – ಪ್ಯಾರಾ-ಬ್ಯಾಡ್ಮಿಂಟನ್
- ಶ್ರೀ ಕಪಿಲ್ ಪರ್ಮಾರ್ – ಪ್ಯಾರಾ ಜೂಡೋ
- ಶ್ರೀಮತಿ ಮೋನಾ ಅಗರ್ವಾಲ್ – ಪ್ಯಾರಾ-ಶೂಟಿಂಗ್
- ಶ್ರೀಮತಿ ರುಬಿನಾ ಫ್ರಾನ್ಸಿಸ್ – ಪ್ಯಾರಾ-ಶೂಟಿಂಗ್
- ಶ್ರೀ ಸ್ವಪ್ನಿಲ್ ಸುರೇಶ್ ಕುಸಲೆ – ಶೂಟಿಂಗ್
- ಶ್ರೀ ಸರಬ್ಜೋತ್ ಸಿಂಗ್ – ಶೂಟಿಂಗ್
- ಶ್ರೀ ಅಭಯ್ ಸಿಂಗ್ – ಸ್ಕ್ವಾಷ್
- ಶ್ರೀ ಸಜನ್ ಪ್ರಕಾಶ್ – ಈಜು
- ಶ್ರೀ ಅಮನ್ – ಕುಸ್ತಿ
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು !
- ಶ್ರೀ ಸುಭಾಷ್ ರಾಣಾ – ಪ್ಯಾರಾ-ಶೂಟಿಂಗ್
- ಕುಮಾರಿ ದೀಪಾಲಿ ದೇಶಪಾಂಡೆ – ಚಿತ್ರೀಕರಣ
- ಶ್ರೀ ಸಂದೀಪ್ ಸಾಂಗ್ವಾನ್ – ಹಾಕಿ