ಆನೇಕಲ್ : ಹೆಬ್ಬಗೋಡಿ ಕೈಗಾರಿಕಾ ಪ್ರದೇಶದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು. ನಾಲ್ಕು ಗಾರ್ಮೆಂಟ್ಸ್ಗಳನ್ನು ಒಳಗೊಂಡಿರುವ ಕಾರ್ಖಾನೆ ಕಾಂಪೌಂಡ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕಾರ್ಖಾನೆ ಒಳಗೆ ಕಾರ್ಮಿಕರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.
ಸ್ವೀಯಿಂಗ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್, ಓರಿಯನ್ಸ್ ಅಪೇರೆಲ್ಸ್ ಮತ್ತು IIGM ಕಂಪನಿಗಳಿಗೆ ಸೇರಿದ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು. ಬೆಂಕಿಯ ಕೆನ್ನಾಲಿಗೆಗೆ ಇಡೀ ಗೋದಾಮು ಧಗಧಗಿಸಿದೆ. ಗಾರ್ಮೇಂಟ್ಸ್ ಪಕ್ಕದಲ್ಲೆ ಸಾಯಿ ವಿಶ್ರಾಮ್ ಹೊಟೇಲ್ ಬೆಂಕಿ ಕೆನ್ನಾಲಿಗೆ ಚಾಚುತ್ತಿದ್ದು. ಆಕಾಶದೆತ್ತರಕ್ಕೆ ಭಾರೀ ಗಾತ್ರದ ಹೊಗೆ ಆವರಿಸಿದೆ.
ಇದನ್ನೂ ಓದಿ :ಮೆಟ್ರೋದಲ್ಲಿ ಮಹಿಳೆಯರ ಪೋಟೋ ತೆಗೆಯುತ್ತಿದ್ದ ಕಾಮುಕ ಲಾಕ್ : 5 ಸಾವಿರ ದಂಡ ವಿಧಿಸಿದ BMRCL
ಬಟ್ಟೆ, ಲೆದರ್, ಕೆಮಿಕಲ್ಗಳನ್ನು ಈ ಕಾರ್ಖಾನೆಯಲ್ಲಿ ಸಂಗ್ರಹಿಸಿದ್ದು. ಶಾರ್ಕ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆಗೆ ಕಾರ್ಖಾನೆಯಲ್ಲಿರುವ ಯಂತ್ರಗಳು ಕೂಡ ಸ್ಪೋಟಗೊಳ್ಳುತ್ತಿದ್ದು ಇದರಿಂದ ಬೆಂಕಿ ವೇಗವಾಗಿ ಆವರಿಸಿದೆ.
ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮತ್ತು ಅನೇಕಲ್ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಕಾರ್ಖನೆ ಒಳಗೆ ಕಾರ್ಮಿಕರು ಸಿಲುಕಿರುವ ಶಂಕೆ ಇದ್ದು. ಇದರ ಬಗ್ಗೆ ಇನ್ನಷ್ಟೆ ಮಾಹಿತಿಗಳು ದೊರೆಯಬೇಕಿದೆ.