Saturday, January 4, 2025

ಹೊಸವರ್ಷದ ಪಾರ್ಟಿ ಮುಗಿಸಿ ಹಿಂತಿರುಗುವ ವೇಳೆ ಅಪಘಾತ : ಇಬ್ಬರ ದುರ್ಮರಣ !

ಚಾಮರಾಜನಗರ: ಹೊಸ ವರ್ಷಮುಗಿಸಿಕೊಂಡು ಬರುವ ವೇಳೆ ವಿದ್ಯುತ್​ ಕಂಬಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಹೊಸ ವರ್ಷದ ದಿನ ರಾಜ್ಯದಲ್ಲಿ ಹಲವೆಡೆ ಅನೇಕ ಅಪಘಾತದ ಪ್ರಕರಣಗಳು ವರದಿಯಾಗಿದ್ದು. ಇದಕ್ಕೆ ಚಾಮರಾಜನಗರ ಕೂಡ ಹೊರತಾಗಿಲ್ಲ.  ಹೊಸವರ್ಷದ ಸಂಭ್ರಮಾಚರಣೆಯನ್ನು ಮುಗಿಸಿಕೊಂಡು ಹಿಂತಿರುಗುವ ವೇಳೆ  ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಸಮೀಪ ಕಾರು ವಿದ್ಯುತ್​ ಕಂಬಕ್ಕೆ ಡಿಕ್ಕಿಯಾಗಿದ್ದು. ಡಿಕ್ಕಿಯ ರಭಸಕ್ಕೆ ವಿದ್ಯುತ್​ ಕಂಬ ಮುರಿದು ಕಾರಿನ ಮೇಲೆ ಬಿದ್ದಿದೆ.

 

ಇದನ್ನೂ ಓದಿ : 308 ಕೋಟಿ ಮೌಲ್ಯದ ಮಧ್ಯ ಮಾರಾಟ : 513 ಡ್ರಿಂಕ್​ ಆ್ಯಂಡ್​ ಡ್ರೈವ್​ ಕೇಸ್​ ದಾಖಲು !

ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಕೊಂಗಳ್ಳಯ್ಯ(45) ಮತ್ತು ಪ್ರತಾಪ್ ಕುಮಾರ್ (28) ಸ್ಥಳದಲ್ಲೇ ಸಾವನ್ನಪ್ಪಿದ್ದು. ಮಂಡ್ಯ ಮೂಲದ ಅಭಿ ಎಂಬಾತ ಗಂಭೀರವಾಗಿ ಗಾಯಗೊಂಡು ಸಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES