ನ್ಯೂ ಇಯರ್​ ಸೆಲಬ್ರೇಶನ್​ ಮುಗಿಸಿ ಹೋಗುವಾಗ ಅಪಘಾತ : ಇಬ್ಬರು ಸ್ಥಳದಲ್ಲೆ ಸಾ*ವು !

ರಾಮನಗರ : ನಿಂತಿದ್ದ ಕ್ಯಾಂಟರ್​ಗೆ ಕಾರ್​ ಡಿಕ್ಕಿಯಾಗಿ ಇಬ್ಬರು  ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ರಾಮನಗರದ ಕನಕಪುರದಲ್ಲಿ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ನಿರಂಜನ್​ ಮತ್ತು ವಿಶ್ವನಾಥ್​ ಎಂದು ಗುರುತಿಸಲಾಗಿದೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಬಂದಿದ್ದ ಯುವಕರು, ಎಲ್ಲ ಸೆಲಬ್ರೇಶನ್​ ಮುಗಿಸಿ ವಾಪಾಸ್​ ಹೋಗುವಾಗ ಅಪಘಾತ ಸಂಭವಿಸಿದೆ. ರಾಮನಗರ ಜಿಲ್ಲೆಯ, ಕನಕಪುರ ತಾಲ್ಲೂಕಿನ, ಸಾತನೂರು ಬಳಿಯಲ್ಲಿ ನಿಂತಿದ್ದ ಕ್ಯಾಂಟರ್​ಗೆ ನಿಯಂತ್ರಣ ತಪ್ಪಿದ ಸಿಫ್ಟ್​ ಕಾರ್​ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ : ಇಬ್ಬರು ಸಾ*ವು, ಐವರಿಗೆ ಗಂಭೀರ ಗಾಯ !

ಅಪಘಾತದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿದ್ದು. ಮೃತರನ್ನು ಬೆಂಗಳೂರು ಮೂಲದ ವಿಶ್ವನಾಥ್​(42) ಮತ್ತು ನಿರಂಜನ್​ (41) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದ್ದು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಸಾತನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES