Thursday, January 2, 2025

ಹೊಸ ವರ್ಷ ಸ್ವಾಗತಕ್ಕೆ ಸಜ್ಜಾದ ರಾಜಧಾನಿ : ಪುಂಡ ಪೋಕರಿಗಳಿಗೆ ಎಚ್ಚರಿಕೆ ನೀಡಿದ ಕಮಿಷ್​ನರ್​ !

ಬೆಂಗಳೂರು: ಹೊಸ ವರ್ಷಚಾರಣೆಗೆ ಸಿಲಿಕಾನ್ ಸಿಟಿ ಮದುವನಗಿತ್ತಿಯಂತೆ ಸಿದ್ದತೆಗೊಂಡಿದೆ. ಜನರು ಕೂಡ ಸಕಲ ಸಿದ್ದತೆಗಳನ್ನು ಮಾಡಿಕೊಂಡು 2025ನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಪ್ರತಿಭಾರಿಯಂತೆ ಈ ಭಾರಿಯು ಬಿಬಿಎಂಪಿ ಮತ್ತು ಪೊಲೀಸ್​ ಇಲಾಖೆ ಹೊಸ ವರ್ಷಚರಣೆಗೆ ಕೆಲವು ಕಟ್ಟುನಿಟ್ಟಿನ ರೂಲ್ಸ್​ ಜಾರಿ ಮಾಡಿದೆ. ಅವುಗಳೇನು ಎಂದು ಈ ವರದಿಯಲ್ಲಿ ನೋಡಿ.

ನಗರದ ಎಂಜಿ ರಸ್ತೆ. ಬ್ರಿಗೇಡ್ ರಸ್ತೆ.. ಕಮರ್ಷಿಯಲ್ ಸ್ಟ್ರೀಟ್ .ಕೋರಮಂಗಲ. ಇಂದಿರಾನಗರಗಳಲ್ಲಿ ಈಗಾಗಲೇ ಹೊಸ ವರ್ಷಾಚರಣೆಗೆ ಬಾರಿ ಸಿದ್ದತೆ ಕೈಗೊಂಡಿದು.ನಾಳೆ ಹೊಸ ವರ್ಷಚಾರಣೆಗೆ ಎಂಜಿ ರಸ್ತೆ. ಬ್ರಿಗೇಡ್ ರಸ್ತೆಗಳಲ್ಲಿ ಅತಿ ಹೆಚ್ಚು ಜನ ಸೇರುವ ಸಾಧ್ಯತೆ ಇದ್ದು ಈ ಬಾರಿ ಹೆಚ್ಚಿನ ಭದ್ರತೆ ಹಾಗೂ ಸುರಕ್ಷತೆಗೆ ಒತ್ತು ನೀಡಲಾಗಿದೆ.

ಹೊಸ ವರ್ಷಕ್ಕೆ ಬಿಬಿಎಂಪಿಯಿಂದ ಹೇಗಿದೆ ಸಿದ್ದತೆ !

  • ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 800 ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ..
  • ರಾತ್ರಿ 7 ಗಂಟೆ ಬಳಿಕ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್..
  • ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ..
  • ಬಾರ್, ಪಬ್ ಗಳಿಗೂ ರಾತ್ರಿ 2 ಗಂಟೆ ಬಳಿಕ ಬಂದ್ ಗೆ ಸೂಚನೆ..
  • ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸಿಸಿಟಿವಿಗಳ ಅಳವಡಿಕೆ..
  • ನ್ಯೂ ಇಯರ್ ಸೆಲಬ್ರೇಷನ್ ನಲ್ಲಿ ನಿಮ್ಮನ್ನ ನಿಗಾವಹಿಸುತ್ತೆ ಹೈಟೆಕ್ ಸಿಸಿ ಕ್ಯಾಮೆರಾ..
  • ಹೆಜ್ಜೆಹೆಜ್ಜೆಗೂ ಸಿಸಿಟಿವಿ ನಿಗಾ, ಆರು ಹೈಟೆಕ್ ಡ್ರೋಣ್ ಗಳ ಹಾರಾಟ..
  • ಪ್ರತಿಯೊಬ್ಬನ ಚಲನವಲನವೂ ಎಲ್ ಇಡಿ ಸ್ಕ್ರೀನ್ ಗಳಲ್ಲಿ ಪ್ಲೇ..
  • ಬ್ರಿಗೇಡ್ ರೋಡ್ ನ ಎರಡು ಬದ್ದಿಯ ವಿದ್ಯುತ್ ಕಂಬಗಳಿಗೆ ನಾಲ್ಕು ಸಿಸಿಟಿವಿ.
  • ಇನ್ನೂ ,,ಮೆಟ್ರೋ , ಬಿಎಂಟಿಸಿ ಬಸ್ ಗಳ ಓಡಾಟ ಅವಧಿ ವಿಸ್ತರಣೆ…
  • ಮಧ್ಯರಾತ್ರಿ 2_ಗಂಟೆಗಳ ವರೆಗೆ ಮೆಟ್ರೋ ಮತ್ತು ಬಿಎಂಟಿಸಿ ಓಡಾಟ.

ಒಟ್ಟಿನಲ್ಲಿ ರಾಜಧಾನಿ ಹೊಸವರ್ಷವನ್ನು ಸ್ವಾಗತಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕೆಂದು ಸೂಚನೆ ನೀಡಲಾಗಿದೆ.

 

RELATED ARTICLES

Related Articles

TRENDING ARTICLES