ಉಡುಪಿ: ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಳ್ಳಲು ಹೋದ ವ್ಯಕ್ತಿ ಹಗ್ಗ ತುಂಡಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯ ಮಣಿಪಾಲ್ನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಿಲ್ರಾಯ್ ಎಂದು ಗುರುತಿಸಲಾಗಿದೆ.
ಉಡುಪಿ ಜಿಲ್ಲೆಯ ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ಘಟನೆ ನಡೆದಿದೆ. 55 ವರ್ಷದ ಮಿಲ್ರಾಯ್ ಎಂಬಾತ ಮನೆಯ ಮೊದಲ ಅಂತಸ್ತಿನ ಮೇಲ್ಚಾವಣಿಗೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾನೆ. ಕುಣಿಕೆಗೆ ಕತ್ತನ್ನು ನೀಡಿ ಕೆಳಗೆ ದುಮುಕಿದ್ದಾನೆ. ಆದರೆ ಕುಣುಕೆಯಲ್ಲಿ ನರಳಾಡುವ ವೇಳೆ ನಿಯಂತ್ರಣ ಸಿಗದೆ ಹಗ್ಗ ತುಂಡಾಗಿದೆ.
ಇದನ್ನೂಓದಿ :ಶೋಕಾಚರಣೆ ಸಂದರ್ಭದಲ್ಲಿ ರಾಹುಲ್ ವಿಯೆಟ್ನಾಂ ಪ್ರವಾಸ : ಕಾಂಗ್ರೆಸ್ ಮೇಲೆ ಮುಗಿಬಿದ್ದ BJP !
ಸುಮಾರು 20 ಅಡಿ ಎತ್ತರದಿಂದ ಹಗ್ಗ ತುಂಡಾಗಿ ವ್ಯಕ್ತಿ ನೆಲಕ್ಕೆ ಬಿದ್ದಿದ್ದಾನೆ. ಕೆಳಗ ಬಿದ್ದ ಕೂಡಲೆ ಮಿಲ್ರಾಯ್ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಈ ವ್ಯಕ್ತಿ 2018ರಲ್ಲೆ ತನ್ನ ದೇಹದ ಅಂಗಾಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.