ಬೆಳಗಾವಿ : ಎರಡು ಮದುವೆಯಾಗಿದ್ದ ಮಹಿಳೆಯೊಬ್ಬಳು ಮತ್ತೊಬ್ಬನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಆದರೆ ಮಹಿಳೆ ಇತ್ತೀಚೆಗೆ ಯುವಕನ ಪೋನ್ ಕಾಲ್ ರಿಸೀವ್ ಮಾಡದೆ ನಿರ್ಲಕ್ಷ ಮಾಡಿದ್ದಳು. ಆದರೆ ಇತ್ತಿಚೆಗೆ ಪ್ರಿಯತಮೆಯನ್ನು ಆಕೆಯ ಗಂಡನೊಂದಿಗೆ ನೋಡಿದ್ದ ಪ್ರೇಮಿ ಆಕೆಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಆದರೆ ಈ ವೇಳೆ ಪತ್ನಿಯ ನೆರವಿಗೆ ಬಂದ ಪತಿ ಯುವಕನಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ, ಗೋಕಾಕ್ ಪಟ್ಟಣದ, ಸಂಗಮೇಶ್ವರ ನಗರದಲ್ಲಿ ಘಟನೆ ನಡೆದಿದೆ. ಎರಡು ಮದುವೆಯಾಗಿದ್ದ ಶೋಭಾ ಮತ್ತು ಆನಂದ್ ಕಳೆದ ಒಂದುವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಆನಂದ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಕಳೆದ 15 ದಿನಗಳಿಂದ ಆನಂದ್ ಪೋನ್ ಕರೆ ಮಾಡಿದರು ಕೂಡ ಶೋಭಾ ಕರೆ ಸ್ವೀಕರಿಸದೆ ನಿರ್ಲಕ್ಷ ಮಾಡಿದ್ದಳು.
ಇದನ್ನೂ ಓದಿ : ಅಮೋಘ ಶತಕ ಸಿಡಿಸಿದ ನಿತಿಶ್ ರೆಡ್ಡಿ : ಸ್ಟೇಡಿಯಂನಲ್ಲಿ ಕಣ್ಣೀರು ಸುರಿಸಿ ದೇವರಿಗೆ ಕೃತಜ್ಙತೆ ಅರ್ಪಿಸಿದ ತಂದೆ !
ಇದರಿಂದ ಆನಂದ್ ಬೆಂಗಳೂರಿನಿಂದ ನಿನ್ನೆ ರಾತ್ರಿ ಶೋಭಾ ಮನೆಗೆ ಹೋಗಿದ್ದನು. ಈ ವೇಳೆ ಶೋಭಾ ತನ್ನ ಎರಡನೆ ಗಂಡನೊಂದಿಗೆ ಇರುವುದನ್ನು ಕಂಡ ಆನಂದ್ ಶಾಕ್ ಆಗಿದ್ದನು. ಈ ವೇಳೆ ಆಕ್ರೋಶಗೊಂಡ ಆನಂದ್ ಶೋಭಾಳ ಕೈಗೆ ಚಾಕುವಿನಿಂದ ಇರಿದಿದ್ದಾನೆ. ಆದರೆ ಬಳಿಕ ಶೋಭಾ ಮತ್ತು ಆಕೆಯ ಎರಡನೇ ಗಂಡ ಮಂಜುನಾಥ್ ಆನಂದ್ ಕೈಲಿದ್ದ ಚಾಕು ಕಸಿದುಕೊಂಡು ಹಲ್ಲೆ ಮಾಡಿದ್ದಾರೆ.
ಆನಂದ್ ಮೇಲೆ ಮಂಜುನಾಥ್ ಮತ್ತು ಶೋಭಾ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಆನಂದ್ ರಕ್ಷಣೆ ಮಾಡಿ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗಾಯಗೊಂಡಿರುವ ಶೋಭಾ ಕೂಡ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಎರಡು ಕಡೆ ಪೊಲೀಸರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.