Wednesday, January 29, 2025

ಆನ್​ಲೈನ್​ ಗೇಮ್​ ಹುಚ್ಚಾಟಕ್ಕೆ ಲಕ್ಷಾಂತರ ಸಾಲ : ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ !

ಬೀದರ್ : ಆನ್​ಲೈನ್​ ಗೇಮ್​ ಹುಚ್ಚಾಟಕ್ಕೆ ಬಿದ್ದ ಯುವಕ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ಕೊನೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೀದರ್​ನಲ್ಲಿ ನಡೆದಿದ್ದು. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ವಿಜಯಕುಮಾರ್​ ಜಗನ್ನಾಥ ಹೊಳ್ಳೆ ಎಂದು ಗುರುತಿಸಲಾಗಿದೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಜ್ಯೋತಿ ತಾಂಡದ ಬಳಿ ಘಟನೆ‌‌‌ ನಡೆದಿದ್ದು. ಮೂಲತಃ ಹುಲಸೂರು ತಾಲೂಕಿನ ಬೇಲೂರು ಗ್ರಾಮದ 25 ವರ್ಷದ ವಿಜಯಕುಮಾರ್​ ಜಗನ್ನಾಥ್​ ಹೊಳ್ಳೆ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಿ-ಫಾರ್ಮಸಿ ಪದವೀದರನಾಗಿರುವ ಯುವಕ ಆನ್​ಲೈನ್​ ಜೂಜಾಟದ ಹುಚ್ಚಿಗೆ ಬಿದ್ದು ಮೊದಲು 10 ಲಕ್ಷ ಸಾಲ ಮಾಡಿಕೊಂಡಿದ್ದನು.

ಇದನ್ನೂ ಓದಿ: ತೃತೀಯ ಲಿಂಗಿ ಮದುವೆಯಾಗಲು ಮುಂದಾದ ಮಗ: ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ದಂಪತಿ !

ಈ ಸಾಲವನ್ನು ಕುಟುಂಬಸ್ಥರು ಈಗಾಗಲೇ ತೀರಿಸಿದ್ದರು. ಆದರೆ ತನ್ನ ಹುಚ್ಚಾಟವನ್ನು ಬಿಡದ ಯುವಕ ಮತ್ತೆ 2 ಲಕ್ಷ ಸಾಲ ಮಾಡಿಕೊಂಡಿದ್ದನು. ಆದರೆ ಈ ಬಾರಿ ಸಾಲದ ವಿಶಯವನ್ನು ಮನೆಗೆ ಗೊತ್ತಾದರೆ ಎಲ್ಲಿ ತೊಂದರೆಯಾಗುತ್ತದೆಯೋ ಎಂದು ಹೆದರಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಪೆಟ್ರೋಲ್​ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಬೀಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಮೇಹಕರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES