Friday, December 27, 2024

ಗ್ರ್ಯಾಂಡ್​ ಆಗಿ ಕ್ರಿಸ್​ಮಸ್​ ಆಚರಿಸಿದ ಯಶ್​ ದಂಪತಿ !

ನಟ ಯಶ್ ಮತ್ತು ರಾಧಿಕಾ ಪಂಡಿತ್ ಮನೆಯಲ್ಲಿ ಕ್ರಿಸ್ಮಸ್ ಹಬ್ಬದ  ಸಂಭ್ರಮ ಜೋರಾಗಿದೆ. ಮಕ್ಕಳೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿರುವ ವಿಡಿಯೋವನ್ನು ನಟಿ ರಾಧಿಕ ಪಂಡಿತ್ ಅವರು ತಮ್ಮ ಸಾಮಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ಹಬ್ಬವಾದರು ಗ್ರ್ಯಾಂಡ್​ ಆಗಿ ಆಚರಣೆ ಮಾಡುವ ಯಶ್​ ದಂಪತಿಗಳು. ತಮ್ಮ ಮಕ್ಕಳನ್ನು ಹಬ್ಬದ ಸಂಬ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಶಿ ಪಡುತ್ತಾರೆ. ಅದೇ ರೀತಿ ಈ ಬಾರಿಯೂ ಕ್ರಿಸ್ಮಸ್​ ಹಬ್ಬಕ್ಕೆ ಸಾಂತಾ ಕ್ಲಾತ್​ ಧರಿಸಿರುವ ರಾಧಿಕ ಮಿಂಚಿದ್ದು. ಮನೆಯಲ್ಲಿ ಕ್ರಿಸ್​ಮಸ್​ ಟ್ರೀ ರೆಡಿ ಮಾಡಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದಲ್ಲಿ ನಟ ಯಶ್​ ಕೂಡ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ : ಮಾಜಿ ಪ್ರಧಾನಿಯನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್​ !

ಇತ್ತೀಚೆಗೆ ಯುಐ ಸಿನಿಮಾ ವಿಕ್ಷೀಸಿದ್ದ ನಟ ಯಶ್​, ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಸ್​.ಎಂ ಕೃಷ್ಣರ ಮನೆಗೆ ಭೇಟಿ ನೀಡಿದ್ದ ಯಶ್​ ದಂಪತಿಗಳು ಅವರ ಕುಟುಂಬಕ್ಕೆ ಸಾತ್ವಾಂನ ಹೇಳಿದ್ದರು.

 

RELATED ARTICLES

Related Articles

TRENDING ARTICLES