Friday, December 27, 2024

IND vs AUS Test : ಮೊದಲ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತಂಡಕ್ಕೆ ಮುನ್ನಡೆ !

ಮೆಲ್ಬೋರ್ನ್​ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್​ಗಳು ಭಾರತದ ಮೇಲೆ ಸವಾರಿ ನಡೆಸಿದ್ದು. ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡಿರುವ ಆಸ್ಟ್ರೇಲಿಯಾ ತಂಡ 311ರನ್​ಗಳನ್ನು ಗಳಿಸಿದೆ.

ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೆ ಆಸ್ಟ್ರೇಲಿಯಾದ 19 ವರ್ಷದ ಆರಂಭಿಕ ಆಟಗಾರ ಸಾಮ್​ ಕೋನ್​ಸ್ಟಾನ್​ ಹಾಗೂ ಉಸ್ಮಾನ್​ ಖವಾಜ 89 ರನ್​ ಪೇರಿಸಿ ಉತ್ತಮ ಅಡಿಪಾಯ ಹಾಕಿದರು. ಆರಂಭದಿಂದಲೆ ಹೊಡಿಬಡಿ ಆಟಕ್ಕೆ ಮುಂದಾದ ಸಾಮ್​ ಕೋನ್​ಸ್ಟಾನ್​ ಕಲಾತ್ಮಕ ಒಡೆತಗಳ ಮೂಲಕ ಎಲ್ಲರ ಉಬ್ಬೇರುವಂತೆ ಮಾಡಿದರು. 65 ಎಸೆತಗಳಲ್ಲಿ 60ರನ್​ ಗಳಿಸಿದ ಕೋನ್​ಸ್ಟಾನ್​ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ರವೀಂದ್ರ ಜಡೇಜ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಇದನ್ನೂ ಓದಿ : ತಲೆಗೆ ಏಟು ಬಿದ್ದಿದ್ದಕ್ಕೆ ಕೆ.ಸಿ ಜನರಲ್​ ಹೆರಿಗೆ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ : ಲಗ್ಗೆರೆ ನಾರಯಣಸ್ವಾಮಿ

ಮತ್ತೊಂದೆಡೆ  ಉಸ್ಮಾನ್​ ಖವಾಜ (57), ಲಾಬುನೇಷ್​ (72), ಸ್ಟೀವನ್​ ಸ್ಮಿತ್​(68) ರನ್​ಗಳನ್ನು ಗಳಿಸಿ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದರು. ಕಳೆದ ಎರಡು ಪಂದ್ಯಗಳಲ್ಲಿ ಭಾರತಕ್ಕೆ ತಲೆ ನೋವಾಗಿ ಪರಿಣಮಿಸಿದ್ದ ಟ್ರಾವಿಸ್​ ಹೆಡ್​ರನ್ನು ಬುಮ್ರಾ ಶೂನ್ಯಕ್ಕೆ ಔಟ್​ ಮಾಡುವ ಮೂಲಕ ಗಮನಸೆಳೆದರು. ಇದರ ಜೊತೆಗೆ ಮಿಚಲ್​ ಮಾರ್ಷ್​(4) ಮತ್ತು ಅಲೆಕ್ಸ್​ ಕ್ಯಾರಿ (31)ರನ್​ಗಳಿಸಿದರು. ನಾಯಕ ಪ್ಯಾಟ್​ ಕಮಿನ್ಸ್​ 8 ರನ್​ಗಳಿಸಿ ನಾಳೆಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಭಾರತದ ಪರ ಬುಮ್ರಾ 3 ವಿಕೆಟ್​ ಗಳಿಸಿದರೆ, ವಾಷಿಂಗ್ಟನ್​ ಸುಂದರ್​, ಆಕಾಶ್​ ದೀಪ್​ ಹಾಗೂ ಜಡೇಜಾ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

RELATED ARTICLES

Related Articles

TRENDING ARTICLES