ಬೆಳಗಾವಿ : ಜಮ್ಮು ಕಾಶ್ಮೀರ್ದಲ್ಲಿ ಸೇನಾವಾಹನ ಕಂದಕಕ್ಕೆ ಉರುಳಿದ ಪರಿಣಾಮವಾಗಿ ರಾಜ್ಯದ ಮೂವರು ಯೋದರು ಸೇರಿದಂತೆ ಒಟ್ಟು 5 ಜನ ಯೋಧರು ಮೃತಪಟ್ಟಿದ್ದರು. ಇಂದು ರಾಜ್ಯದ ಮೂವರು ಯೋಧರ ಪಾರ್ಥಿವ ದೇಹಗಳು ರಾಜ್ಯಕ್ಕೆ ಆಗಮಿಸಿದ್ದು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಗೌರವ ಅರ್ಪಣೆ ಮಾಡಿದ್ದಾರೆ.
ಯೋಧರ ಪಾರ್ಥಿವಗಳನ್ನು ಜಮ್ಮುಕಾಶ್ಮೀರದಿಂದ ನಾಗ್ಪುರಕ್ಕೆ ತಂದು ಅಲ್ಲಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಯೋದರ ಪಾರ್ಥಿವಕ್ಕೆ ಅಂತಿಮ ನಮನ ಸಲ್ಲಿಸಿದ್ದು. ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದ್ದಾರೆ. ಅಲ್ಲಿಂದ ಯೋಧರ ಮೃತದೇಹಗಳನ್ನು ಮರಾಠಾ ಲೈಟ್ ಇನ್ಪೆಂಟ್ರಿಯತ್ತ ತಲುಪಿದ್ದು. ಇಲ್ಲಿ ಸಿಎಂ. ಸಿದ್ದರಾಮಯ್ಯ, ಡಿಸಿಎಂ ಡಿ,ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.
ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ಕೋರಿದ ಸಿಎಂ. ಸಿದ್ದರಾಮಯ್ಯ !
ಯೋಧರ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದ ಸಿದ್ದರಾಮಯ್ಯ ಮಾಧ್ಯಮದ ಜೊತೆಗೆ ಮಾತನಾಡಿದರು. ‘ ಜಮ್ಮು ಕಾಶ್ಮೀರದಲ್ಲಿ ಮೃತಪಟ್ಟ ಯೋಧರ ಆತ್ಮಕ್ಕೆ ಚಿರಶಾಂತಿ ಕೋರಿದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಏನೆಲ್ಲಾ ಪರಿಹಾರ ನೀಡಬೇಕೋ ಅವುಗಳನ್ನು ನೀಡುತ್ತೇವೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಸರ್ಕಾರದ ನಿಯಮಾನುಸಾರ ಅವರಿಗೆ ಏನೇನು ಪರಿಹಾರ ನೀಡಬೇಕೋ ಅವುಗಳನ್ನು ತಕ್ಷಣ ಕೊಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಹುತಾತ್ಮ ಯೋಧ ದಯಾನಂದ್ಗೆ ಮಕ್ಕಳಿಂದ ಅಂತಿಮ ನಮನ ಸಲ್ಲಿಕೆ !
ಹುತಾತ್ಮ ದಯಾನಂದ್ ಅವರ ಪಾರ್ಥಿವ ದೇಹಕ್ಕೆ ಅವರ ಇಬ್ಬರು ಮಕ್ಕಳು ಅಂತಿಮ ನಮನ ಸಲ್ಲಿಸಿದ್ದು. ಪುತ್ರ ಗಣೇಶ್ ಮತ್ತು ಪುತ್ರಿ ವೈಷ್ಣವಿ ತಂದೆಗೆ ಸೆಲ್ಯೂಟ್ ಹೊಡೆದು ಅಂತಿಮ ನಮನ ಸಲ್ಲಿಸಿದರು. ಈ ದೃಷ್ಯ ಎಲ್ಲರ ಮನಕಲಕುವಂತಿತ್ತು.