ಕಲಬುರಗಿ : ಟೆಂಪೋ ಟೈರ್ ಬ್ಲಾಸ್ಟ್ ಆದ ಪರಿಣಾಮ ಸರಣಿ ಅಪಘಾತವಾಗಿದ್ದು. ಅಪಘಾತದ ಪರಿಣಾಮವಾಗಿ ಮೂವರು ಸಾವನ್ನಪ್ಪಿದ್ದಾರೆ. ಉಳಿದ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಲಬುರಗಿ ಜಿಲ್ಲೆಯ ಗೊಬ್ಬೂರ್ ಬಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು. ಟೆಂಪೋ ಟ್ರಾವಲರ್, ಕಬ್ಬು ತುಂಬಿದ್ದ ಲಾರಿ, ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಟಿ.ಟಿ ಯಲ್ಲಿದ್ದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು. 7 ಜನರು ಗಾಯಗೊಂಡಿದ್ದಾರೆ. ಅದರ ಜೊತೆಗೆ ಬೈಕ್ ಸವಾರನು ಕೂಡ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮೃತರನ್ನು ವಿನೂತಾ ಕಲಬುರಗಿ (54) ಅನೂಪ್ ಮಾಧವ್ (29) ಬಸವರಾಜ್ (33) ಎಂದು ಗುರುತಿಸಿದ್ದು. ವಿನೂತ್ ಮತ್ತು ಅನೂಪ್ ಕಲಬುರಗಿಯ ಸ್ಟೇಶನ್ ಬಜಾರ್ ಏರಿಯಾದ ನಿವಾಸಿಗಳು ಎಂದು ಗುರುತಿಸಲಾಗಿದೆ. ಟಿಟಿಯಲ್ಲಿದ್ದ ಎಲ್ಲರು ಗಾಣಗಾಪುರದ ದತ್ತನ ದರ್ಶನ ಮುಗಿಸಿಕೊಂಡು ಬರುತ್ತಿದ್ದರು. ಆದರೆ ದುರದೃಷ್ಟವಶಾತ್ ಘಟನೆ ಸಂಭವಿಸಿದೆ.
ಸ್ಥಳಕ್ಕೆ ಕಲಬುರಗಿಯ ಎಸ್.ಪಿ ಅಡ್ಡೂರು ಶ್ರೀ ನಿವಾಸುಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ದೇವಲ ಗಾಣಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.