ಬೆಂಗಳೂರು : ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ಸಿನಿಮಾ MAX ಅಂತಿಮವಾಗಿ ದೇಶಾದ್ಯಂತ ಥಿಯೇಟರ್‌ಗಳಿಗೆ ಆಗಮಿಸಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಸಂಯುಕ್ತ ಹೊರನಾಡು, ಸುಕೃತಾ ವಾಗ್ಲೆ ಅವರೊಂದಿಗೆ ಸುನಿಲ್, ಶರತ್ ಲೋಹಿತಾಶ್ವರಂತಹ ಅನುಭವಿ ನಟರು ಅಭಿನಯಿಸಿದ್ದಾರೆ.
ಸುದೀಪ್ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟ ಪ್ರೇಕ್ಷಕ ಮಹಾಪ್ರಭು !
ಚಿತ್ರವನ್ನು ವೀಕ್ಷಸಿದ ಪ್ರೇಕ್ಷಕರ ವಿಮರ್ಶೆಯ ಮೇರೆಗೆ ಈ ಸಿನಿಮಾ ಒಂದು ಅಸಾಧಾರಣ ಆಕ್ಷನ್ ಸಿನಿಮಾ ಆಗಿದ್ದು. ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಆದಾರವಾಗಿಟ್ಟುಕೊಂಡು ಸಿನಿಮಾ ನಿರ್ಮಿಸಲಾಗಿದೆ. ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಪ್ರತಿಮ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದು. ಇಡೀ ಚಿತ್ರತಂಡದ ಶ್ರಮಕ್ಕೆ ಪ್ರೇಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ವಿಜಯ್ ಕಾರ್ತಿಕೇಯನ್ ಅವರು ತಮ್ಮ ಚೊಚ್ಚಲ ಚಿತ್ರದಲ್ಲಿಯೆ ಯಶಸ್ಸು ಕಂಡಿದ್ದಾರೆ.
ಇದನ್ನೂ ಓದಿ : “ಮೊಟ್ಟೆ ಅಟ್ಯಾಕ್” ಚಿತ್ರದ ರಚನೆ ಹಾಗೂ ನಿರ್ಮಾಣ ಮುನಿರತ್ನನದು : ಕುಸುಮ ಹನುನಮಂತರಾಯಪ್ಪ
ಚಿತ್ರಕ್ಕೆ ಕನಿಷ್ಟ ಪ್ರಚಾರ, ಕನ್ನಡೇತರ ಪ್ರದೇಶಗಳಲ್ಲಿ ಸೀಮಿತ ಪ್ರದರ್ಶನ, ಮಧ್ಯರಾತ್ರಿ ವೇಳೆ ಸಿನಿಮಾ ವೀಕ್ಷಣೆಗೆ ಅನುಪಸ್ಥಿತಿ ಮತ್ತು ಬಿಡುಗಡೆಯ ಎರಡು ದಿನಗಳ ಮೊದಲು ದೊರೆತ ಮುಗಂಡ ಟಿಕೆಟ್ ಬುಕಿಂಗ್ ಲಭ್ಯತೆ ಈ ರೀತಿ ಹಲವು ಸಮಸ್ಯೆಗಳು ಮತ್ತು ಅಡೆತಡೆಗಳ ಮಧ್ಯೆಯು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಸಿನಿಮಾ ತಂಡ ಯಶಸ್ವಿಯಾಗಿದೆ.
ನಟ ಕಿಚ್ಚ ಸುದೀಪ್ ನಟನೆ, ನಿರ್ದೇಶಕ ವಿಜಯ್ ಕಾರ್ತಿಕೇಯನ್ ನಿರ್ದೇಶನ ಮತ್ತು ಸಂಗೀತ ನಿರ್ದೇಶಕ ಅಜಿನೀತ್ ಲೋಕನಾಥ್ ಅವರ ಹಿನ್ನಲೆ ಸಂಗೀತ ಪ್ರೇಕ್ಷಕರಿಗೆ ಮನರಂಜನೆಯ ಔತಣವನ್ನೆ ಬಡಿಸಿದೆ ಎಂದರೆ ತಪ್ಪಾಗಲಾರದು. ಒಟ್ಟಾರೆಯಾಗಿ ಹೇಳುವುದಾದರೆ ನಟ ಸುದೀಪ್ ಎರಡುವರೆ ವರ್ಷದ ನಂತರ ಬೆಳ್ಳಿ ತೆರೆಗೆ ಅಪ್ಪಿಳಿಸಿದ್ದರು ಕೂಡ ತಮ್ಮ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಬಡಿಸಿದ್ದಾರೆ ಎನ್ನಬಹುದು.