Monday, December 23, 2024

ಫೊರ್ಟಿಸ್​ ಆಸ್ಪತ್ರೆಯಲ್ಲಿ ಬಾಣಂತಿ ಸಾವು : ವೈದ್ಯರ ನಿರ್ಲಕ್ಷ್ಯ ಎಂದ ಕುಟುಂಬಸ್ಥರು !

ಬೆಂಗಳೂರು : ಬಳ್ಳಾರಿ,ಬೆಳಗಾವಿ ಬೆನ್ನಲ್ಲೇ ಬೆಂಗಳೂರಲ್ಲೂ ಬಾಣಂತಿಯೊಬ್ಬರು ಸಾವನ್ನಪ್ಪಿದ್ದು. ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅನುಷಾ ಎಂಬಾಕೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯವರ ನಿರ್ಲಕ್ಷದಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಶಿವಮೊಗ್ಗ ಆಸ್ಪತ್ರೆ ವೈದ್ಯರ ಎಡವಟ್ಟಿಗೆ ಬಲಿಯಾದಳ ಮಹಿಳೆ ?

ಮೂಲತಂ ಕಡೂರು ತಾಲ್ಲೂಕಿನ ಗರ್ಜೆ ಗ್ರಾಮದವರಾದ ಅನುಷಾ ತರೀಕೆರೆ ನರ್ಸಿಂಗ್ ಆಸ್ಪತ್ರೆಯಲ್ಲಿ ನಾರ್ಮಲ್​ ಡೆಲಿವರಿ ಮಾಡಿಸಿಕೊಂಡಿದ್ದರು. ಈ ವೇಳೆ ಸ್ಕ್ಯಾನಿಂಗ್ ಮಾಡಿಸಿಕೊಂಡಾಗ ವೈದ್ಯರು ಹೊಟ್ಟೆಯಲ್ಲಿ ಸ್ಟೋನ್​ ಇದೆ ಎಂದು ಹೇಳಿದ್ದ ವೈದ್ಯರು ಡಿಲಿವರಿ ಆದ ಒಂದು ತಿಂಗಳಲ್ಲೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್​ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ: ಕುರ್​-ಕುರೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ : 10 ಜನ ಆಸ್ಪತ್ರೆಗೆ ದಾಖಲು !

ಆಪರೇಷನ್ ಮಾಡುವ ವೇಳೆ ಬಾಣಂತಿಯ ಕರುಳಿಗೆ ಗಾಯಮಾಡಿದ್ದರು. ಆದರೆ ಈ ವಿಷಯವನ್ನು ತಿಳಿಸದ ವೈದ್ಯರು ಮುಚ್ಚಿಟ್ಟಿದ್ದರು ಎಂದು ಬಾಣಂತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆಪರೇಷನ್​ ನಡೆಸಿದ ನಂತರ ಮಹಿಳೆಯನ್ನು ಮನೆಗೆ ಕಳುಹಿಸಿದ್ದರು. ಆದರೆ ಮಹಿಳೆಯ ಕೈಕಾಲುಗಳಲ್ಲಿ ಊತ ಕಾಣಿಸಿಕೊಂಡ ಹಿನ್ನಲೆ ಮತ್ತೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ವೈದ್ಯರು ನಾರ್ಮಲ್​ ಇದೆ ಎಂದು ಹೇಳಿದರು. ಆದರೆ ಶಿವಮೊಗ್ಗದ ಸ್ಥಳೀಯ ಆಸ್ಪತ್ರೆಯ ವೈದ್ಯರು ಮಹಿಳೆಗೆ ಜಾಂಡಿಸ್​ ಇದೆ ಎಂದು ಹೇಳಿದ್ದರು.

ಬೆಂಗಳೂರಿನ ಆಸ್ಪತ್ರೆಯ ವೈದ್ಯರ ಮೇಲೂ ಕುಟುಂಬಸ್ಥರ ಆರೋಪ !

ಶಿವಮೊಗ್ಗದಿಂದ ಬಾಣಂತಿಯನ್ನು ಬೆಂಗಳೂರಿಗೆ ರವಾನೆ ಮಾಡಿದ್ದು. ನಾಗರಬಾವಿಯಲ್ಲಿರುವ ಪೋರ್ಟಿಸ್​ ಆಸ್ಪತ್ರೆಗೆ ಮಹಿಳೆಯನ್ನು ದಾಖಲು ಮಾಡಿದ್ದರು.

ಆಸ್ಪತ್ರೆಗೆ ದಾಖಲಾದ ನಂತರ ವೈದ್ಯರು ದಿನಕ್ಕೊಂದು ಕತೆ ಹೇಳುತ್ತಿದ್ದು. ಸಿ,ಟಿ ಸ್ಕ್ಯಾನ್​, ಎಂಆರ್​ಐ ಸ್ಕ್ಯಾನ್​ ಮಾಡಿದ ನಂತರ ಕಳೆದ ಗುರುವಾರ ಲಿವರ್​ ಪ್ರಾಬ್ಲಂ ಇದೆ ಎಂದು ಹೇಳಿದ್ದರು. ಶುಕ್ರವಾರ ಮತ್ತೆ ಅನುಷಾಗೆ ಆಪರೇಶನ್​ ಮಾಡಿದ್ದರು. ಆದರೆ ಆಪರೇಶನ್​ ಮಾಡಿದ ದಿನದಿಂದ ಮಹಿಳೆ ಕಣ್ಣು ತೆರೆದಿರಲಿಲ್ಲ. ಆದರೆ ಮತ್ತೆ ಬಂದ ವೈದ್ಯರು ಮಹಿಳೆಗೆ ಹಾರ್ಟ್​ ಪ್ರಾಬ್ಲಂ ಇದೆ ಎಂದು ಹೇಳಿದ್ದರು.

ಆದರೆ ಇಂದು ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು. ಮಹಿಳೆಯ ಪತಿ ಆಸ್ಪತ್ರೆಯ ನಿರ್ಲಕ್ಷಕ್ಕೆ ಮಹಿಳೆ ಸಾವಾಗಿದೆ ಎಂದು ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES