Sunday, February 23, 2025

ದರ್ಶನ್​ ಬಿಡುಗಡೆಗೆ ಹರಕೆ : ಬಾಡೂಟ ಹಾಕಿಸಿ ಸಂಭ್ರಮಿಸಿದ ಅಭಿಮಾನಿಗಳು !

ಮಂಡ್ಯ: ನಟ ದರ್ಶನ್​ ಜಾಮೀನಿನ ಮೇಲೆ ಬಿಡುಗಡೆಗೊಂಡರೆ ಊರ ಜನರಿಗೆ ಬಾಡೂಟ ಹಾಕಿಸುವುದಾಗಿ ಹರಕೆ ಕಟ್ಟಿಕೊಂಡಿದ್ದ ದರ್ಶನ್​ ಅಭಿಮಾನಿಗಳು ಊರಿನ ಜನರಿಗೆ ಬಾಡೂಟ ಹಾಕಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

ಇದನ್ನೂ ಓದಿ : ಫುಟ್​​ಪಾತ್​ ಮೇಲೆ ಮಲಗಿದ್ದವರ ಮೇಲೆ ಹರಿದ ಲಾರಿ : ಮೂವರು ಸಾ*ವು !

ಮಂಡ್ಯದ ಮಳವಳ್ಳಿ ತಾಲ್ಲೂಕಿನ ಬಾಣ ಸಮುದ್ರ ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು. ನಟ ದರ್ಶನ್​ ಜಾಮೀನಿನ ಮೇರೆಗೆ ಜೈಲಿನಿಂದ ಬಿಡುಗಡೆಗೊಂಡ ಹಿನ್ನಲೆ ಹಾಗೂ ಆಸ್ಪತ್ರೆಯಿಂದ ಡಿಸ್ಚರ್ಜ ಆದ ಕಾರಣ ಊರಿನ ಜನರಿಗೆ ಬಾಡೂಟ ಹಾಕಿಸಿದ್ದಾರೆ. ಇಂದು ಗ್ರಾಮದಲ್ಲಿ ಪಟಾಕಿ ಸಿಡಿಸಿ, ಜೈಕಾರ ಕೂಗಿ, ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES