Monday, December 23, 2024

ಸೈಬರ್​ ವಂಚನೆ : 12 ಕೋಟಿ ಕಳೆದುಕೊಂಡ ಬೆಂಗಳೂರಿನ ಸಾಫ್ಟ್​ವೇರ್​ ಉದ್ಯೋಗಿ !

ಬೆಂಗಳೂರು : ದಿನ ಕಳೆದಂತೆ ಸೈಬರ್​ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಡಿಜಿಟಲ್​ ಅರೆಸ್ಟ್​​ಗೆ ಹೆದರಿದ ಬೆಂಗಳೂರಿನ ಇಂಜಿನಯರ್​ ಒಬ್ಬ ಸುಮಾರು 12 ಕೋಟಿ ಹಣವನ್ನು ಕಳೆದುಕೊಂಡಿದ್ದಾನೆ. ಹಣ ಕಳದುಕೊಂಡ ವ್ಯಕ್ತಿಯನ್ನು ವಿಜಯ್​ ಕುಮಾರ್​ ಎಂದು ಗುರುತಿಸಲಾಗಿದೆ.

ವಿಜಯ್​ ಕುಮಾರ್​ ಬೆಂಗಳೂರಿನಲ್ಲಿ ಸಾಫ್ಟ್​ವೇರ್​ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದನು. ಆದರೆ ಈತನಿಗೆ ಟ್ರಾಯ್​ನಿಂದ ಅಪರಿಚಿತ ಕರೆಯೊಂದು ಬಂದಿದ್ದು. ಪೋನ್​ ಕರೆಯಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ನಿಮ್ಮ ಆಧಾರ್​ ಕಾರ್ಡ್​ನ್ನು ಮನಿ ಲಾಂಡರಿಂಗ್​ನಲ್ಲಿ ಬಳಸಿಕೊಳ್ಳಲಾಗಿದೆ. ನಿಮ್ಮ ಮೇಲೆ ಮುಂಬೈ ಕ್ರೈಂ ಬ್ರಾಂಚ್​ನಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದಾರೆ.

ಇದನ್ನೂ ಓದಿ :  ಲಾರಿ-ಕಾರು ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರು ಯುವಕರು ಸ್ಥಳದಲ್ಲೆ ಸಾ*ವು !

ಅಷ್ಟೆ ಅಲ್ಲದೆ ನಿಮ್ಮ ಆಧಾರ್​ ಕಾರ್ಡ್ ಬಳಸಿಕೊಂಡು ಸುಮಾರು 6 ಕೋಟಿ ವಂಚನೆ ಆಗಿದೆ. ನಿಮ್ಮ ಮೇಲೆ ಸುಪ್ರೀಂ ಕೋರ್ಟ್​ನಲ್ಲಿ ಕೇಸ್​ ನಡಿತಾ ಇದೆ.  ನಿಮ್ಮ ಮೇಲೆ ಡಿಜಿಟಲ್​ ಅರೆಸ್ಟ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಹಂತ ಹಂತವಾಗಿ ಹಣವನ್ನು ವಸೂಲಿ ಮಾಡಿದ್ದು. ಸುಮಾರು 11 ಕೋಟಿ 83 ಲಕ್ಷ ಹಣವನ್ನು ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ.

ಘಟನೆ ಸಂಬಂಧ ಈಶಾನ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಇದರ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES