ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್,ಎಂ ಕೃಷ್ಣರು ನಿಧನರಾಗಿ, ಅವರ ಪುಣ್ಯಸ್ಮರಣೆಯು ನಡೆದಿದೆ. ಇಂದು ನಟ ಯಶ್ ಸದಾಶಿವ ನಗರದಲ್ಲಿರುವ ಎಸ್,ಎಂ,ಕೆ ಅವರ ನಿವಾಸಕ್ಕೆ ಭೇಟಿ ನೀಡಿದ್ದು. ಕುಟುಂಬಸ್ಥರಿಗೆ ಸಾತ್ವಾಂನ ಹೇಳಿದ್ದಾರೆ.
ಸದಾಶಿವ ನಗರದಲ್ಲಿರುವ ಎಸ್.ಎಂ.ಕೆ ಅವರ ಮನೆಗೆ ಭೇಟಿ ನೀಡಿದ ನಟ ಯಶ್ ಮತ್ತು ಅವರ ಪತ್ನಿ ರಾಧಿಕ ಕುಟುಂಬಸ್ಥರೊಂದಿಗೆ ಮಾತನಾಡಿದರು. ನಂತರ ಬಂದು ಮಾಧ್ಯಮದೊಂದಿಗೆ ಮಾತನಾಡಿದ ಯಶ್, ‘ ಎಸ್ಎಂಕೆ ಅವರನ್ನು ಎಲ್ಲರು ನೆನಪಿಸಿಕೊಳ್ಳಬೇಕು, ಅವರ ಕೆಲಸವನ್ನು ಎಲ್ಲರು ನೆನಪಿಸಿಕೊಳ್ಳಬೇಕು. ಅವರದ್ದು ಅತ್ಯಂತ ಅಪರೂಪದ ವ್ಯಕ್ತಿತ್ವ. ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.
ಅವರು ಯಾವಾಗಲೂ ಪ್ರೋಗ್ರೆಸ್ ಬಗ್ಗೆ ಹೇಳುತ್ತಿದ್ದರು. ಯಾವಗ ಸಿಕ್ಕರೂ ನಮ್ಮನ್ನು ಹರಸುತ್ತಿದ್ದರು. ಅವರನ್ನು ತುಂಬಾ ಹಿಂದೆ ಭೇಟಿ ಮಾಡಿದ್ದೆ. ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.