Monday, December 23, 2024

ಸಂಸದೆ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಪ್ರಿಯಾಂಕಾ : ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದರಾ !

ನವದೆಹಲಿ: ಕಳೆದ ತಿಂಗಳು ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗೆಲುವು ಸಾಧಿಸಿದ್ದರು. ಇದನ್ನು ಪ್ರಶ್ನಿಸಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ನವ್ಯಾ ಹರಿದಾಸ್ ಅವರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಆಸ್ತಿ ವಿವರಣೆಯಲ್ಲಿ ತಪ್ಪು ಮಾಹಿತಿ ನೀಡಿದರಾ ಪ್ರಿಯಾಂಕಾ !

ಕಾಂಗ್ರೆಸ್ ಸಂಸದರು ತಮ್ಮ ಮತ್ತು ತಮ್ಮ ಕುಟುಂಬದ ಆಸ್ತಿಯನ್ನು ನಾಮಪತ್ರದಲ್ಲಿ ಸರಿಯಾಗಿ ಬಹಿರಂಗಪಡಿಸಿಲ್ಲ. ಜೊತೆಗೆ “ಸುಳ್ಳು ಮಾಹಿತಿ” ನೀಡಿದ್ದಾರೆ ಎಂದು ನವ್ಯಾ ಹರಿದಾಸ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಇದು ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿದೆ ಮತ್ತು ಭ್ರಷ್ಟ ಆಚರಣೆಗಳಿಗೆ ಸಮಾನವಾಗಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ : ಅಲ್ಲು ಅರ್ಜುನ್​ ಮನೆ ಮೇಲೆ ಕಲ್ಲೂ ತೂರಾಟ : ಪುಷ್ಪ ಹೀರೋಗೆ ಇದೆಂತಾ ಸಂಕಷ್ಟ ! 

“ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ನಾವು ನಿನ್ನೆ ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿಯನ್ನು ಸಲ್ಲಿಸಿದ್ದೇವೆ. ನಾಮಪತ್ರಗಳು ತಪ್ಪು ದಾರಿಗೆಳೆಯುತ್ತಿವೆ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕುಟುಂಬದ ಆಸ್ತಿಯಂತಹ ಹಲವು ಪ್ರಮುಖ ವಿಷಯಗಳನ್ನು ನಾಮಪತ್ರಗಳಿಂದ ಮರೆಮಾಡಲಾಗಿದೆ” ಎಂದು ನವ್ಯಾ ಹೇಳಿದ್ದಾರೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

RELATED ARTICLES

Related Articles

TRENDING ARTICLES