ಚಿಕ್ಕಮಗಳೂರು : ಬಿಜೆಪಿ ನಾಯಕ ಸಿ,ಟಿ ರವಿಗೆ ಚಿಕ್ಕಮಗಳೂರಿನಲ್ಲಿ ಭಾರೀ ಸ್ವಾಗತ ದೊರೆತಿದ್ದು. ನಗರದ ಹೀರೆಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದ್ದಾರೆ. ಈ ವೇಳೆ ಕಾರ್ಯಕರ್ತರ ಪ್ರೀತಿಯನ್ನು ಕಂಡ ಸಿ,ಟಿ ರವಿ ಕಣ್ಣೀರಿಟ್ಟಿದ್ದಾರೆ.
ಲಕ್ಷ್ಮೀ ಹೆಬ್ಬಳ್ಕಾರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪ್ರಕರಣದಲ್ಲಿ ಪೊಲೀಸ್ ಬಂದನದಲ್ಲಿದ್ದ ಸಿ,ಟಿ ರವಿ ಬಿಡುಗಡೆಯಾಗಿ ಸ್ವಕ್ಷೇತ್ರಕ್ಕೆ ಮರಳಿದ್ದು. ಮೆರವಣಿಗೆ ಮೂಲಕ ಕಾರ್ಯಕರ್ತರು ಸಿ,ಟಿ ರವಿಯನ್ನು ಬರಮಾಡಿಕೊಂಡಿದ್ದಾರೆ. ಈ ವೇಳೆ ಸಿ,ಟಿ ರವಿ ಅವರ ಪತ್ನಿ ಪಲ್ಲಿವಿ ಭಾವುಕರಾಗಿದ್ದು. ಗಂಡನನ್ನು ತಬ್ಬಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ ಪ್ರಕರಣ : ಲಿಂಗಾಯತ ಸಂಪ್ರಾದಾಯದಂತೆ ನೆರವೇರಿದ ಮೃತರ ಅಂತ್ಯ ಸಂಸ್ಕಾರ !
ಆರತಿ ಎತ್ತಿ ಸ್ವಾಗತ ಕೋರಿದ ಮುತ್ತೈದೆಯರು !
ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದಂತೆ ಸಿ,ಟಿ ರವಿಗೆ 5 ಜನ ಮುತ್ತೈದೆಯರು ಆರತಿ ಬೆಳಗುವ ಮೂಲಕ ಸ್ವಾಗತ ಕೋರಿದ್ದು. ವೃದ್ದೆಯೊಬ್ಬರು ಸಿ,ಟಿ ರವಿಗೆ ನಿಂಬೆಹಣ್ಣಿನಲ್ಲಿ ದೃಷ್ಟಿ ತೆಗೆಯುವ ಮೂಲಕ ಕುಣಿದು ಕುಪ್ಪಳಿಸಿದ್ದಾರೆ.
ಕ್ಷೇತ್ರದ ಜನರ ಪ್ರೀತಿ ಕಂಡು ಕಣ್ಣೀರಿಟ್ಟ ಸಿ,ಟಿ ರವಿ !
ಸ್ವ ಕ್ಷೇತ್ರದಲ್ಲಿ ಕಾರ್ಯಕರ್ತರ ಪ್ರೀತಿ ಕಂಡು ಸಿ.ಟಿ.ರವಿ ಕಣ್ಣೀರಿಟ್ಟಿದ್ದು. ನನ್ನ ಕಷ್ಟದಲ್ಲಿ ನೀವು ಜೊತೆಗಿದ್ದೀರಾ, ಅದೇ ರೀತಿ ನಿಮ್ಮ ಕಷ್ಟದಲ್ಲಿ ನಾನು ಜೊತೆಗಿರುತ್ತೇನೆ. ನೀವು ನನಗೆ ಬೆನ್ನು ತೋರಿಸುವುದಾ ಹೇಳಿಕೊಟ್ಟಿಲ್ಲ, ಎದೆ ತೋರಿಸೋದ ಹೇಳಿಕೊಟ್ಟಿದ್ದೀರಾ. ನಾನು ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿಲ್ಲ. ಕೆಟ್ಟದ್ದು ಬಯಸಿಲ್ಲ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಿ,ಟಿ ರವಿ ಮಧ್ಯಾರಾತ್ರಿ 1 ಗಂಟೆಗೆ ನಿಮ್ಮನ್ನು ನೋಡಿದ್ರೆ ಪುಣ್ಯ ಬರುತ್ತಿದೆ. ನಾನು ಸುರಿಸುತ್ತಿರುವುದು ಕಣ್ಣೀರಲ್ಲ. ಇದು ಆನಂದಭಾಷ್ಪ. ರಾಜ್ಯದ ಉದ್ದಗಲಕ್ಕೂ ಕಾರ್ಯಕರ್ತರು, ಪಕ್ಷದ ಮುಖಂಡರು, ಕೇಂದ್ರ ಸಚಿವರು ಧೈರ್ಯ ತುಂಬಿದ್ದಾರೆ. ಎಲ್ಲರೂ ಧೈರ್ಯ ತುಂಬಿದ್ದಾರೆ ಎಂದು ಹೋರಾಡುವ ವಿಶ್ವಾಸ ವ್ಯಕ್ತಪಡಿಸಿದರು.