ಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ ಸಾವಿರ ಕಿ,ಮೀ ದೂರದಲ್ಲಿದೆ. ಈ ಸ್ಥಳಗಳನ್ನು ಅಭಿವೃದ್ದಿ ಮಾಡಲು ಶಾಸಕರಿಗೆ ಕಿವಿ ಮಾತು ಹೇಳಿ ಎಂದು ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟರು.
ಕಲಬುರಗಿಯಿಂದ ಏಳು ಜನ ಶಾಸಕರು, ಕಲ್ಯಾಣ ಕರ್ನಾಟಕದಿಂದ ಐದು ಜನ ಎಮ್.ಪಿ ಗಳನ್ನ ಕಳುಹಿಸಿದ್ದೆವೆ. ಈಗ ಜಯದೇವ ಆಸ್ಪತ್ರೆಯಾಗಿದೆ. ಇದರ ಜೊತೆಗೆ ನಿಮಾನ್ಸ್ ಆಸ್ಪತ್ರೆಯ ಬ್ರ್ಯಾಂಚ್ ಇಲ್ಲಿ ನಿರ್ಮಾಣ ಆಗಬೇಕು,
ಡಯಾಬೇಟೋಲಜಿ ಕೂಡ ಇಲ್ಲಿ ನಿರ್ಮಾಣವಾಗಬೇಕು. ಸಿದ್ದರಾಮಯ್ಯನವರು ಇಲ್ಲಿಯ ಶಾಸಕರಿಗೆ ಕಿವಿ ಮಾತು ಹೇಳಿ ಕೆಲಸ ಮಾಡಿಸಬೇಕು ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಖರ್ಗೆ ‘ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ.
ಇಲ್ಲಿ ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ , ವಿದ್ಯಾರ್ಥಿಗಳು ಸಂಶೋಧನೆ ಮಾಡೋದಕ್ಕೆ ಆಗುತ್ತಿಲ್ಲ. ಮೈಸೂರಿಗೆ 300 ಕೋಟಿ ಕೊಟ್ಟಿದ್ದೀರ ಅಲ್ವಾ ಎಂದು ಸಿದ್ದರಾಮಯ್ಯರಿಗೆ ಪ್ರಶ್ನಿಸಿದರು. ಈ ವೇಳೆ ಸಿದ್ದರಾಮಯ್ಯ 100 ಕೋಟಿ ಕೊಟ್ಟಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ : ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬಡಿಸಲು ಬಂದ ಪ್ರಗತಿಪರರು : ಬಾಡೂಟವನ್ನು ವಶಕ್ಕೆ ಪಡೆದ ಪೊಲೀಸರು
ಗುಲ್ಬರ್ಗಾ ವಿವಿಯಲ್ಲಿ ಸಾಕಷ್ಟು ಹುದ್ದೆಗಳು ಬಾಕಿಯಿವೆ, ಅವುಗಳನ್ನು ಮೊದಲು ಭರ್ತಿ ಮಾಡಬೇಕು. ವಿವಿಯ ಬಿಲ್ಡಿಂಗ್ ಕೂಡ ಬೀಳುವ ಸ್ಥಿತಿ ತಲುಪಿದೆ ಅದನ್ನು ಸರಿಪಡಿಸಬೇಕು. ಗುಲ್ಬರ್ಗಾದ ಏಪೊರ್ಟ್ ಕೂಡ ಬಂದ್ ಆಗಿದೆ, ಅದರ ಪುನರ್ ಆರಂಭ ನಾವು ಮಾಡುತ್ತೇವೆ. ಗುಲ್ಬಾರ್ಗ ವಿವಿಯಲ್ಲಿ ಹೆಚ್ಚಿನ ಕೋರ್ಸ್ಗಳನ್ನು ಪರಿಚಯಿಸಿದರೆ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಕಲಬುರಗಿ ಹಿಂದುಳಿದ ಭಾಗ ಹಾಗಾಗಿ ನೌಕರಿ ಕೂಡ ಕಡಿಮೆ ಸಿಗುತ್ತೆ. ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಸಿಎಂಗೆ ಸಲಹೆ ನೀಡಿದರು.
ಕಲಬುರಗಿ ಅಭಿವೃದ್ದಿಯಲ್ಲಿ ಹಿಂದೆ ಉಳಿದಿರುವ ಕಾರಣದಿಂದ ಈ ಭಾಗದ ಸಚಿವರು ಸಿಎಂ ಹಿಂದೆ ಬಿದ್ದು ಅಭಿವೃದ್ದಿ ಮಾಡಿ ಎಂದು ಕೇಳಬೇಕು. ಕೆಲವು ಬಾರಿ ಇದರ ಬಗ್ಗೆ ಸಿಎಂ ಸಿಟ್ಟಾಗಬಹುದು. ಆದರೆ ಬೆನ್ನು ಬಿದ್ದು ಕೆಲಸ ಮಾಡಿಸಿಕೊಳ್ಳಿ ಎಂದು ಕಲ್ಯಾಣ ಕರ್ನಾಟಕ ಭಾಗದ ಸಚಿವರಿಗೆ ಸಲಹೆ ನೀಡಿದರು.
ಜಯದೇವ ಆಸ್ಪತ್ರೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು !
ಜಯದೇವ ಆಸ್ಪತ್ರೆಯನ್ನು 371 ಜೆ ನೆನಪಿಗಾಗಿ 371 ಬೆಡ್ನ್ನು ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದೆ. ನಮ್ಮ ಜಯದೇವ ಆಸ್ಪತ್ರೆ ಮೈಸೂರು, ಹುಬ್ಬಳ್ಳಿ ಸೇರಿ ಏಷ್ಯಾದಲ್ಲೆ ದೊಡ್ಡ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಯನ್ನು ಸರಿಯಾಗಿ ಮೆಟೇನ್ ಮಾಡಬೇಕಿದೆ. ಶರಣು ಪ್ರಕಾಶ್, ಸಿದ್ದರಾಮಯ್ಯ ಸೇರಿ ಆಸ್ಪತ್ರೆ ನಿರ್ಮಾ ಮಾಡಿದ್ದಾರೆ. ಅದರ ಜೊತೆಗೆ ಕಲಬುರಗಿಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡುತ್ತಾರೆ. ಅದನ್ನು ಸರಿಪಡಿಸಬೇಕು ಎಂದು ಹೇಳಿದರು.