ಮಂಡ್ಯ : ಬೈಕ್ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. ಮತ್ತೋರ್ವ ಯುವತಿಯ ಸ್ಥತಿ ಗಂಭೀರವಾಗಿದೆ ಎಂದು ಮಾಹಿತಿ ದೊರೆತಿದೆ.
ಮಹದೇಶ್ವರಪುರ ಬಳಿಯ ಮೈಸೂರು-ಜೇವರ್ಗಿ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು. ನೀಲನಹಳ್ಳಿಯ 19 ವರ್ಷದ ಸಂಧ್ಯಾ ಮತ್ತು 35 ವರ್ಷದ ಶಿಲ್ಪ ಮೃತರಾಗಿದ್ದಾರೆ, ಮತ್ತೊಬ್ಬ ಯುವತಿಯ ಸ್ಥಿತಿ ಗಂಭೀರವಾಗಿದ್ದು. ಶೈಲಜಾ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಗಾರ್ಮೆಂಟ್ ಬಸ್ ಅಪಘಾತ : 25 ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯ !
ಗ್ರಾಮದ ಶಿಲ್ಪ ಮತ್ತು ಶೈಲಜಾ ತಿರುಪತಿಗೆ ಹೋಗಲು ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಸಂಧ್ಯಾಳ ಬಳಿಯಲ್ಲಿ ಡ್ರಾಫ್ ಕೇಳಿದ್ದಾರೆ. ಡ್ರಾಪ್ ನೀಡಲು ಬೈಕ್ ಹತ್ತಿಸಿಕೊಂಡ ಮಹಿಳೆ ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಅಪಘಾತ ಸಂಭವಿಸಿದ್ದು. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.