ತುಮಕೂರು : ಅಪ್ಪು ಪುತ್ತಳಿಯನ್ನು ತೆರವುಗೊಳಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು. ಡಿಸೆಂಬರ್ 18ರಂದು ಕನ್ನಡ ರಕ್ಷಣಾ ವೇದಿಕೆಯ ಅಪ್ಪು ಸೇನೆಯಿಂದ ಸ್ಥಾಪಿಸಿದ್ದ ಅಪ್ಪು ಪುತ್ತಳಿಯನ್ನು ತೆರವುಗೊಳಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ತಿಪಟೂರಿನ ಹೊನ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಡಿಸೆಂಬರ್ 18 ರಂದು ಕನ್ನಡ ರಕ್ಷಣಾ ವೇದಿಕೆಯ ಅಪ್ಪು ಸೇನೆವತಿಯಿಂದ ಪುನೀತ್ ರಾಜ್ ಕುಮಾರ್ ಪುತ್ತಳಿಯನ್ನು ಸ್ಥಾಪಿಸಲು ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಗ್ರಾಮ ಪಂಚಾಯತಿ ಅನುಮತಿ ನೀಡದ ಕಾರಣ ಹೊನ್ನವಳ್ಳಿಯಲ್ಲಿ ಗುರುವಾರ ರಾತ್ರಿಯೇ ಪುನೀತ್ ಪುತ್ತಳಿಯನ್ನು ಸ್ಥಾಪಿಸಿದ್ದರು.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತ : ಕಂಟೈನರ್ ಕೆಳಗೆ ಅಪ್ಪಚ್ಚಿಯಾದ ಕಾರು, ನಾಲ್ವರು ಸ್ಥಳದಲ್ಲೆ ಸಾ*ವು !
ಆದರೆ ಶುಕ್ರವಾರ ಬೆಳಗಿನ ಜಾವ ಪುತ್ತಳಿಗೆ ಪೂಜೆ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಪೊಲೀಸರು ಪುನೀತ್ ರಾಜ್ಕುಮಾರ್ ಅವರ ಪುತ್ತಳಿಯನ್ನು ತೆರವು ಮಾಡಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು. ಪೊಲೀಸರು ಪುತ್ತಳಿಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು. ಹೊನ್ನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.