ಬೆಳಗಾವಿ : ಜಿಲ್ಲೆಯ ಅಥಣಿ ತಾಲ್ಲೂಕಿನ, ಚಿಕ್ಕೋಡ ಗ್ರಾಮದಲ್ಲಿ ಗರ್ಭಿಣಿಯ ಹತ್ಯೆಯಾಗಿದ್ದು. ಒಂಬತ್ತು ತಿಂಗಳು ತುಂಬಿದ್ದ ತುಂಬು ಗರ್ಭಿಣಿಯನ್ನು ದುಶ್ಕರ್ಮಿಗಳು ಇರಿದು ಕೊಂದಿದ್ದಾರೆ ಎಂದು ತಿಳಿದು ಬಂದಿದೆ .
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು. 33 ವರ್ಷದ ಸುವರ್ಣ ಮಾಂತಯ್ಯ ಮಠಪತಿ ಎಂಬ ಮಹಿಳೆಯ ಹತ್ಯೆಯಾಗಿದೆ. ಮಹಿಳೆ ಮನೆಯಲ್ಲಿ ಒಬ್ಬಳೆ ಇದ್ದ ವೇಳೆ ಮನೆಗೆ ಬಂದಿರುವ ದುಷ್ಕರ್ಮಿಗಳು ಹರಿತವಾದ ಆಯುಧವನ್ನು ಬಳಸಿಕೊಂಡು ಮಹಿಳೆಯ ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ : ಬಿಜೆಪಿ ಪಕ್ಷದಲ್ಲಿರುವ ಎಲ್ಲರು ದುಶ್ಯಾಸನರೆ : ಪ್ರಿಯಾಂಕ್ ಖರ್ಗೆ
ಗರ್ಭಿಣಿ ಮಹಿಳೆ ಸುರ್ವಣಾಗೆ 4 ಮಕ್ಕಳಿದ್ದರು. ಇದೀಗ ಅವರು 5ನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಮುಂದಿನ ವಾರ ಹೆರಿಗೆ ದಿನಾಂಕವನ್ನು ವೈದ್ಯರು ನಿಗಧಿ ಮಾಡಿದ್ದರು ಎಂದು ಮಾಹಿತಿ ದೊರೆತಿದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯ ಮರಣೋತ್ತರ ಪರಿಕ್ಷೇ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು. ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.