Thursday, January 23, 2025

ಹೊಸ ವರ್ಷಾಚರಣೆಗೆ ಹೊಸ ರೂಲ್ಸ್​: ಎಂ.ಜಿ ರಸ್ತೆಗೆ ಕಾಲಿಡೋ ಮುನ್ನ ರೂಲ್ಸ್​ ಓದ್ಕೋಳಿ !

ಬೆಂಗಳೂರು: 2024 ವರ್ಷಕ್ಕೆ ಗುಡ್ ಬೈ ಹೇಳೋಕೆ ಕೌಂಟ್ ಡೌನ್ ಶುರುವಾಗಿದೆ. ಇತ್ತ ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನ ವೆಲ್ ಕಮ್ ಮಾಡೋಕೆ ಸಜ್ಜಾಗ್ತಿದ್ದಾರೆ. ಆದರೆ ಪ್ರತಿ ವರ್ಷದಂತೆ ಈ ಬಾರಿಯೂ ಬಿಬಿಎಂಪಿ ಹೊಸ ವರ್ಷದ ಗೈಡ್​ ಲೈನ್ಸ್ ರಿಲೀಸ್ ಮಾಡಿದೆ.

ನ್ಯೂಇಯರ್ ಸೆಲೆಬ್ರೇಷನ್‌ಗೆ ಹೊಸ ರೂಲ್ಸ್‌

ಹೊಸ ವರ್ಷಾಚರಣೆ ಜೋಶ್‌ಗೆ ಕೆಲ ದಿನಗಳಷ್ಟೇ ಬಾಕಿ ಉಳಿದುಕೊಂಡಿವೆ. ನ್ಯೂಇಯರ್‌ ಭರ್ಜರಿ ಸೆಲೆಬ್ರೇಷನ್‌ಗೆ ಇಡೀ ಸಿಲಿಕಾನ್ ಸಿಟಿಯೇ ತುದಿಗಾಲಲ್ಲಿ ಕಾತರದಿಂದ ಕಾಯ್ತಿದೆ. ಸದ್ಯ ಬೆಂಗಳೂರು ಪೊಲೀಸರು ಹಾಗೂ ಪಾಲಿಕೆ ಅಲರ್ಟ್ ಆಗಿದ್ದು, ನ್ಯೂ ಇಯರ್ ಗೈಡ್‌ಲೈನ್ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಿರೋ ಪಾಲಿಕೆ ಈ ಬಾರಿಯೂ ನ್ಯೂ ಇಯರ್‌ಗೆ ಕೆಲ ರೂಲ್ಸ್ ಜಾರಿ ತರಲು ಸಜ್ಜಾಗಿದೆ.

ಬಿಬಿಎಂಪಿ ವಿಧಿಸಿರುವ ನಿಯಮಗಳು ಯಾವುವೆಂದರೆ !

  • ರಾತ್ರಿ 1 ಗಂಟೆಯೊಳಗೆ ಸೆಲೆಬ್ರೇಷನ್‌ ಮುಗಿಯಬೇಕು
  • ರಾತ್ರಿ 10 ಗಂಟೆ ಬಳಿಕ ಪ್ರಮುಖ ಫ್ಲೈಓವರ್ ಬಂದ್
  • MG ರಸ್ತೆ, ಬ್ರಿಗೇಡ್ ರಸ್ತೆ ಯಲ್ಲಿ ವಾಹನ ಸಂಚಾರ ಬಂದ್
  • ರಾತ್ರಿ 8 ಗಂಟೆಯ ಬಳಿಕ ವಾಹನಗಳ ಸಂಚಾರ ಬಂದ್
  • ಬ್ರಿಗೇಡ್ ರಸ್ತೆ ಸೇರಿ 800ಕ್ಕೂ ಹೆಚ್ಚು CCTV ಅಳವಡಿಕೆ
  • ಮಹಿಳೆಯರ ಸುರಕ್ಷತೆಗೆ ಮಹಿಳಾ ಸಿಬ್ಬಂದಿ ನಿಯೋಜನೆ
  • ಬಾರ್, ಪಬ್‌‌ಗಳಿಗೂ ರಾತ್ರಿ 1 ಗಂಟೆವರೆಗೆ ಅವಕಾಶ
  • ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ
  • ಲೌಡ್ ಸ್ಪೀಕರ್ ಹಾಗೂ ಪಟಾಕಿ ಸಿಡಿಸಲು ನಿರ್ಬಂಧ

ರಾತ್ರಿ 1 ಗಂಟೆಯೊಳಗೆ ಸೆಲೆಬ್ರೇಷನ್‌ ಮುಗಿಯಬೇಕು. ರಾತ್ರಿ 10 ಗಂಟೆ ಬಳಿಕ ಪ್ರಮುಖ ಫ್ಲೈಓವರ್ ಬಂದ್ ಮಾಡ್ಬೇಕು. MG ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ರಾತ್ರಿ 8 ಗಂಟೆಯ ಬಳಿಕ ವಾಹನ ಸಂಚಾರ ಬಂದ್ ಮಾಡ್ಬೇಕು. MG ರೋಡ್‌, ಬ್ರಿಗೇಡ್ ರಸ್ತೆ ಸೇರಿ 800ಕ್ಕೂ ಹೆಚ್ಚು CCTV ಅಳವಡಿಕೆ ಮಾಡಲು ತೀರ್ಮಾನ. ಮಹಿಳೆಯರ ಸುರಕ್ಷತೆಗೆ ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಲಿದ್ದು, ಬಾರ್, ಪಬ್‌‌ಗಳಿಗೂ ರಾತ್ರಿ 1 ಗಂಟೆವರೆಗೆ ಅವಕಾಶ ಇರಲಿದೆ. ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯವಾಗಿದ್ದು, ಲೌಡ್ ಸ್ಪೀಕರ್ ಹಾಗೂ ಪಟಾಕಿ ಸಿಡಿಸಲು ನಿರ್ಬಂಧ ವಿಧಿಸಲಾಗಿದೆ

RELATED ARTICLES

Related Articles

TRENDING ARTICLES