Saturday, May 10, 2025

ಹೆಬ್ಬಾಳ್ಕರ್​​ರನ್ನು ನಾನು ಇಂದಿಗೂ ಲಕ್ಷ್ಮಕ್ಕ ಎಂದೆ ಕರೆಯುತ್ತೇನೆ : ಸಿ,ಟಿ ರವಿ

ಬೆಂಗಳೂರು : ಪರಿಷತ್​ ಶಾಸಕ ಸಿ,ಟಿ ರವಿ ಇಂದು ನಗರದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದು. ಬೆಳಗಾವಿ ಅಧಿವೇಶನದ ಸಮಯದಲ್ಲಿ ನಡೆದ ಘಟನೆಯನ್ನು ಕುರಿತು ವಿವರಿಸಿದರು. ಈ ವೇಳೆ ಸಂಸದ ಗೋವಿಂದ ಕಾರಜೋಳ, ಛಲವಾದಿ ನಾರಾಯಣಸ್ವಾಮಿ, ಎಮ್.ಎಲ್.ಸಿ ರವಿ ಕುಮಾರ್, ಶಾಸಕ ರಾಮಮೂರ್ತಿ, ಗೋಪಾಲಯ್ಯ ಸೇರಿ ಹಲವರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿ,ಟಿ ರವಿ ‘ ನನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ ಮಾತನ್ನು ಆರಂಭಿಸಿದರು. ‘ 19 ನೇ ತಾರೀಕಿನಂದು ಸದನ ಆರಂಭವಾದ ನಂತರ ಪ್ರಶ್ನೋತ್ತರ ಕಲಾಪ ನಡೆಯಿತು ನಂತರ ಕಲಾಪ ಮೂಂದೂಡುಕೆಯಾದ ನಂತರ ಅಂಬೆಡ್ಕರ್ ವಿಷಯ ಚರ್ಚೆಗೆ ಬಂತು. ನಾವು ಕಾಂಗ್ರೆಸ್​ನವರು ಅಂಬೆಡ್ಕರ್​ರನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ಹೇಳಲು ಆಚೆ ಬಂಧೊ ಆ ವೇಳೆ ಇದಾಗಿದೆ ಎಂದು ಹೇಳಿದ್ದಾರೆ. ಆದರೆ ನಾನೂ ಹಿಂದಿಗೂ ಹೆಬ್ಬಾಳ್ಕರ್​ರನ್ನು ಲಕ್ಷ್ಮಕ್ಕ ಎಂದೆ ಕರೆಯುತ್ತೇನೆ’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಸಿ,ಟಿ ರವಿ ‘ ಇದಾದ ನಂತರ ನನ್ನ ಮೇಲೆ ಆಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಆರೋಪ ಮಾಡಿದರು. ನಂತರ ಸಭಾಪತಿಗಳು ಬಂದು ರೂಲಿಂಗ್ ಕೊಟ್ಟರು. ಅವರು ಅಂತರಾತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಿ ಎಂದು ಹೇಳಿದರು. ಅದನ್ನೂ ನಾನು ಮಾಡಿಕೊಂಡಿದ್ದೇನೆ. ಆದರೆ ಬಳಿಕ ನಡೆದ ಘಟನೆಯೇ ಬೇರೆ, ಸುವರ್ಣ ಸೌಧ ಪಶ್ಚಿಮ ದ್ವಾರದ ಬಳಿ ಕಾರ್ ಮೇಲೆ ಅಟ್ಯಾಕ್ ಮಾಡಿದರು. ನಂತರ ಸುವರ್ಣ ಸೌದದ ಕಾರಿಡಾರ್​ನಲ್ಲಿ ಮೂನಾಲ್ಕು ಜನ ಹಲ್ಲೆಗೆ ಯತ್ನಿಸಿದರು ಆದರೆ ಮಾರ್ಷಲ್​ಗಳು ನನ್ನನ್ನು ರಕ್ಷಿಸಿದರು ಎಂದು ಹೇಳಿದರು.

ನಂತರ ಸಭಾಪತಿಗಳು ನಮ್ಮನ್ನು ಕರೆದರು ನಾವು ಅವರಿಗೆ ಲಿಖಿತವಾಗಿ ದೂರು ನೀಡಿದೆವು. ನಂತರ ಅವರು ರೂಲಿಂಗ್​ ನೀಡಿ ಸದನವನ್ನು ಅನಿಧಿಷ್ಟವದಿಗೆ ಮುಂದೂಡಿದರು. ಈ ಸಮಯದಲ್ಲಿ ಸದನದಲ್ಲಿದ್ದ ಕಾಂಗ್ರೆಸ್​ ಸದಸ್ಯರು. ನನ್ನ ಕುಟುಂಬವನ್ನು ನಿಂದಿಸಿದರು. ಬಳಿಕ ಸಭಾಪತಿಗಳು ಒಂದು ಲೋಪವು ಆಗದಂತೆ ಮನೆಗೆ ಬಿಡಿ ಎಂದು ಹೇಳಿದರು.

ಇದಾದ ನಂತರ ಪೊಲೀಸರು ನನ್ನನ್ನು ಬಂಧಿಸದರು. ಪೊಲೀಸ್​​ ಠಾಣೆಗೆ ಕರೆದೊಯ್ದು ನಾನು ದೂರು ಕೊಟ್ಟರು ಸ್ವೀಕರಿಸದೆ. ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅನೇಕ ಜಾಗಗಳಲ್ಲಿ ಸುತ್ತಿಸಿದರು. ಈ ವೇಳೆ ನಾನು ನೀರು ಕೇಳಿದರು ಕೊಡದೆ. ನನ್ನ ಮೊಬೈಲ್​ ಪೋನ್​ನನ್ನು ಬಲವಂತವಾಗಿ ಕಿತ್ತುಕೊಂಡರು. ತಲೆಗೆ ಗಾಯವಾಗಿದೆ ಎಂದರು ಸೂಕ್ತ ಚಿಕಿತ್ಸೆ ನೀಡದೆ ನನ್ನನ್ನು ಅಲೆಸುತ್ತಿದ್ದರು. ನನ್ನನ್ನು ಸಾಯಿಸಲು ಮುಂದಾಗುತ್ತಿದ್ದಾರೆ ಎಂದು ನನಗೆ ಅನುಮಾನವಿತ್ತು ಎಂದು ಹೇಳಿದರು.

ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಸಿ,ಟಿ ರವಿ !

ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಸಿ,ಟಿ ರವಿ ‘ ಡಿ,ಕೆ ಶಿವಕುಮಾರ್​ ನಿನ್ನನ್ನು ಜೀವಂತವಾಗಿ ಬಿಟ್ಟಿದ್ದೆ ಹೆಚ್ಚು ಎಂದು ಹೇಳುತ್ತಾರೆ. ಹಾಗದರೆ ಇದೇನು ಬೆಳಗಾವಿ ಬನಾನಾ ರಿಪಬ್ಲಿಕ್​ ಅಥವಾ ಕನಕಪುರ ರಿಪಬ್ಲಿಕ್​ ಎಂದು ಕೊಂಡಿದ್ದಾರಾ. ಕರ್ತವ್ಯ ಲೋಪ ಎಸಗಿದ ಪೊಲೀಸರನ್ನು ಸಸ್ಪೆಂಡ್​ ಮಾಡುತ್ತೇವೆ ಎಂದು ಹೇಳಿದ್ದಾರೆ, ಹಾಗಾದರೆ ಗೃಹ ಇಲಾಖೆ ಸರ್ಕಾರದ ಬಳಿಯಲ್ಲಿ ಇಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಸಿ,ಟಿ ರವಿ ‘ ಚಿಕ್ಕಮಗಳೂರಿನಲ್ಲಿ ಭಾಷೆ ಹೇಗಿದೆ ಅಂತ ಎಲ್ಲರಿಗೂ ಗೊತ್ತಿದೆ
ನನ್ನ ಟ್ರಾಕ್ ರೆಕರ್ಡ್ ಏನು ಬೇರೆಯವರ ಟ್ರಾಕ್ ರೆಕಾರ್ಡ್ ಏನು ಗೊತ್ತಿದೆ. ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ. ಚಿಕ್ಕಮಗಳೂರು ಜನಕ್ಕೆ ನನ್ನ ಸಂಸ್ಕೃತಿ ಗೊತ್ತಿದೆ, ನಾನು ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸುತ್ತೇನೆ. ಆದರೆ ನನಗೆ ಭದ್ರತೆ ಕೊಡೊದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES