ಬೆಂಗಳೂರು : ನೆಲಮಂಗಲದ ಟಿ. ಬೇಗೂರು ಬಳಿಯಲ್ಲಿ ಭೀಕರ ಸರಣಿ ಅಪಘಾತವಾಗಿದ್ದು. ಡಿವೈಡರ್ ಮೇಲೆ ಹತ್ತಿದ ಕಂಟೈನರ್ ಲಾರಿ, ಕಾರಿನ ಮೇಲೆ ಉರುಳಿ ಬಿದ್ದು 6 ಜನ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ಸಂಭವಿಸಿದ್ದು. ತುಮಕೂರಿನಿಂದ ಬೆಂಗಳೂರಿನ ಕಡೆಗೆ ಕಂಟೈನರ್ ಲಾರಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು. ಮೊದಲು ಎರಡು ಲಾರಿಗಳ ನಡುವೆ ಅಪಘಾತವಾಗಿದ್ದು. ಈ ವೇಳೆ ಕಂಟೈನರ್ ಲಾರಿ ಕಾರಿನ ಮೇಲೆ ಉರುಳಿ ಬಿದ್ದಿದೆ. ಲಾರಿ ಕೆಳಗೆ ಕಾರು ಸಿಲುಕಿ ಅಪ್ಪಚ್ಚಿಯಾಗಿದ್ದು. ಕಾರಿನಲ್ಲಿದ್ದ ಇಬ್ಬರು ಪುರುಷರು, ಇಬ್ಬರು ಮಹಿಳೆಯರು, ಮಗು ಸೇರಿದಂತೆ ಒಟ್ಟು 6 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ತುಮಕೂರು ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದ್ದು. ಸುಮಾರು 3 ಕಿ.ಮೀ ಟ್ರಾಫಿಕ್ ಜಾಮ್ ಆಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಬಂದು ತೆರವು ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.