Saturday, December 21, 2024

ಕಾಂಗ್ರೆಸ್​ ಸರ್ಕಾರದ ದಬ್ಬಾಳಿಕೆಗೆ ಹೈಕೋರ್ಟ್​ ಮಂಗಳಾರತಿ ಎತ್ತಿದೆ : ಬಿ.ವೈ ವಿಜಯೇಂದ್ರ

ಬೆಂಗಳೂರು : ರಾಜ್ಯ ಉಚ್ಛ ನ್ಯಾಯಾಲಯ ಕಾಂಗ್ರೆಸ್ ಸರ್ಕಾರದ ಪೊಲೀಸ್ ದಬ್ಬಾಳಿಕೆಗೆ ಮಂಗಳಾರತಿ ಎತ್ತಿದೆ.  ಪ್ರಜಾಪ್ರಭುತ್ವ ಗೆದ್ದಿದೆ, ಶಾಸಕ ಶ್ರೀ ಸಿ.ಟಿ ರವಿಯನ್ನು ಬಂಧಿಸುವ ಮೂಲಕ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದು ಮಾಹಿತಿ ದೊರೆತಿದೆ. 

ನಿನ್ನೆಯಿಂದ ಇಂದಿನವರಗೂ ಮಾನ್ಯ ಸಿ. ಟಿ. ರವಿ ಅವರನ್ನು ನಿಯಮ ಮೀರಿ ಬಂಧಿಸುವ ಮೂಲಕ ತುರ್ತು ಪರಿಸ್ಥಿತಿಯ ಕರಾಳತೆಯನ್ನು ಕಾಂಗ್ರೆಸ್ ಸರ್ಕಾರ ಇಂದಿನ ಪೀಳಿಗೆಗೆ ನೆನಪು ಮಾಡಿಕೊಟ್ಟಿದೆ.

ಇದನ್ನೂ ಓದಿ : ಸಿ.ಟಿ ರವಿಗೆ ಬಿಗ್​ ರಿಲೀಫ್​ : ಬಿಡುಗಡೆಗೊಳಿಸಿ ಎಂದು ಆದೇಶ ಹೊರಡಿಸಿದ ಹೈಕೋರ್ಟ್​ !

ಗೂಂಡಾಗಳನ್ನು ಪೋಷಿಸಿಕೊಂಡು ಸರ್ಕಾರ ನಡೆಸುವುದು, ಪೊಲೀಸರನ್ನು ಬಳಸಿಕೊಂಡು ಯಾರನ್ನು ಬೇಕಾದರೂ ಬಂಧಿಸುತ್ತೇವೆಂದು ದ್ವೇಷ ಸಾರಲು ಹೊರಟಿದ್ದ ಈ ಸರ್ಕಾರಕ್ಕೆ ಪಾಠ ಹೇಳುವ ರೀತಿಯಲ್ಲಿ ಉಚ್ಚ ನ್ಯಾಯಾಲಯ ಸಕಾಲದಲ್ಲಿ ಮಧ್ಯ ಪ್ರವೇಶಿಸಿ ಸಂವಿಧಾನ ಹಾಗೂ ಈ ನೆಲದ ಕಾನೂನಿನ ಘನತೆಯನ್ನು ತಿಳಿಸಿಕೊಟ್ಟಿದೆ. ನ್ಯಾಯಾಲಯದ ಈ ತೀರ್ಪನ್ನು ಕರ್ನಾಟಕದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸಿ, ಶಾಸಕ ಸಿ.ಟಿ ರವಿಯವರನ್ನು ಅಭಿನಂದಿಸುತ್ತೇನೆ.

ಪ್ರಜಾಪ್ರಭುತ್ವ ದಮನಮಾಡಿ ದಬ್ಬಾಳಿಕೆ, ಕ್ರೌರ್ಯ ತುಂಬಿಕೊಂಡ ವರ್ತನೆಗಳು ಹಾಗೂ ಭ್ರಷ್ಟಾಚಾರದ ಹಗರಣಗಳನ್ನು ಮೈಗೆ ಮೆತ್ತಿಕೊಂಡಿರುವ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ತಾರ್ಕಿಕ ಅಂತ್ಯ ಕಾಣುವವರೆಗೂ, ವಿರಮಿಸದೇ ತನ್ನ ಹೋರಾಟ ಮುನುವರೆಸಲಿದೆ.

ಪ್ರಜಾಪ್ರಭುತ್ವ ದೇಗುಲದಲ್ಲಿ ನಡೆದ ಪರಮ ದೌರ್ಜನ್ಯದ ಈ ಘಟನೆಯನ್ನು, ದೇಶದ ಗಮನ ಸೆಳೆಯುವಂತೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪರಿಣಾಮಕಾರಿ ಪಾತ್ರ ವಹಿಸಿದ ಮಾಧ್ಯಮಗಳನ್ನು ಈ ಸಂದರ್ಭದಲ್ಲಿ ಮನಃ ಪೂರ್ವಕವಾಗಿ ಅಭಿನಂದಿಸುವೆ, ಎಂದು ರಾಜ್ಯ ಬಿಜೆಪಿ ರಾಜ್ಯಧ್ಯಕ್ಷ ಸಿ.ಟಿ ರವಿಯವರ ಬಿಡುಗಡೆಗೆ ಟ್ವಿಟ್​ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES