ಹುಬ್ಬಳ್ಳಿ : ಸಿ.ಟಿ ರವಿ ವಿರುದ್ದ ರಾಜ್ಯ ಕಾಂಗ್ರೆಸ್ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರತಿಭಟನೆ ನಡೆಸುತ್ತಿದ್ದು. ಹುಬ್ಬಳ್ಳಿಯಲ್ಲಿ ಸಹ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸಿ.ಟಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಮಹಿಳಾ ಕಾರ್ಯಕರ್ತರಿಂದ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಪ್ರತಿಭಟನೆ ನಡೆದಿದ್ದು. ಹರಕು ಬಾಯಿಯ ಸಿಟಿ ( ಓಟಿ ) ರವಿಗೆ ದಿಕ್ಕಾರ ಎಂದು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಸಿಟಿ ರವಿ ಪೋಟೋಗೆ ಚಪ್ಪಲಿಯಲ್ಲಿ ಒಡೆಯುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ವಿಭಿನ್ನ ಪ್ರತಿಭಟನೆ !
ವಿಭಿನ್ನವಾಗಿ ಪ್ರತಿಭಟನೆ ನಡೆಸಿರುವ ಹುಬ್ಬಳ್ಳಿ ಕಾಂಗ್ರೆಸ್ ಮಹಿಳಾ ಮೋರ್ಚದ ಮುಖಂಡರು ‘ ಸಿ,ಟಿ ರವಿ ಪೋಟೋಗೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿ,ಟಿ ರವಿ ಭಾವಚಿತ್ರಕ್ಕೆ ಹೂ ಹಾಕಿ, ಭಾವಚಿತ್ರದ ಮುಂದೆ ಬಾಳೆಹಣ್ಣು, ನಿಂಬೆಹಣ್ಣು ಇಟ್ಟು ಪೂಜೆನ ಸಲ್ಲಿಸಿ ಶ್ರಾದ್ದ ಮಾಡಿದ್ದಾರೆ. ಓಟಿ, ಲೂಟಿ. ಸಿಟಿ ರವಿಗೆ ಧಿಕ್ಕಾರ ಎಂದು ಕೂಗುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.