ರಾಮನಗರ: ನಾಳೆಯಿಂದ (ಡಿ.20) ಸಕ್ಕರೆ ನಾಡು ಮಂಡ್ಯದಲ್ಲಿ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು. ಈ ಸಮ್ಮೇಳನವನ್ನು ನಡೆಸುವುದರಿಂದ ಏನು ಪ್ರಯೋಜನ ಇಲ್ಲ ಎಂದು ಹಿರಿಯ ಕನ್ನಡ ಪರ ಹೋರಾಟಗಾರರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ‘ನಮಗೆ ಸಮ್ಮೇಳನ ಬೇಡ “ಕನ್ನಡ ಬೆಳಸಿ, ಕನ್ನಡ ಉಳಿಸಿ” ಎಂದು ಘೋಷಣೆ ಕೂಗಿದ್ದಾರೆ. ಸಾಹಿತ್ಯ ಸಮ್ಮೇಳನ ನಡೆಸುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದಿರುವ ವಾಟಾಳ್. ಸದನದಲ್ಲಿ ಕನ್ನಡದ ಬಗ್ಗೆ ಚರ್ಚೆ ಮಾಡದ ಇವರು ಸುಮ್ಮನೆ ಹೋಳಿಗೆ, ಕೋಸಂಬರಿ ತಿನ್ನಲು ಈ ಸಮ್ಮೇಳನ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಮುಂದುವರಿದು ಮಾತನಾಡಿದ ವಾಟಾಳ್ ನಾಗರಾಜ್ ‘ ಈ ಸಾಹಿತ್ಯ ಸಮ್ಮೇಳನ ನಮಗೆ ಬೇಕಾಗಿಲ್ಲ.
ಸರೋಜಿನಿ ಮಹಿಷ ವರದಿ ಜಾರಿ ಮಾಡಬೇಕು. ಬೆಂಗಳೂರು ಅನ್ಯ ಭಾಷಿಗರ ಪಾಲಾಗುತ್ತಿದೆ, ಇದನ್ನ ತಪ್ಪಿಸಬೇಕು ಎಂದು ವಾಟಾಳ್ ನಾಗರಾಜ್ ರಾಮನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಡಿಸಿ ಕಚೇರಿ ಒಳಗೆ ಪ್ರವೇಶಿಸಲು ಮುಂದಾದರು. ಈ ವೇಳೆ ಪೊಲೀಸರು ವಾಟಾಳ್ ನಾಗರಾಜ್ರನ್ನು ವಶಕ್ಕೆ ಪಡೆದರು.